ಸುಳ್ಯ: ನ್ಯಾಯ ಒದಗಿಸುವಂತೆ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ| ಮೆಟ್ಟಿಲ ಬಳಿ ಮಲಗಿದ ಹೋರಾಟಗಾರರು

ಸುಳ್ಯ: ನ್ಯಾಯ ಒದಗಿಸುವಂತೆ ಆಗ್ರಹಿಸಿ ಇಡೀ ಕುಟುಂಬವೇ ತಾಲ್ಲೂಕು ಕಚೇರಿ ಮುಂಭಾಗ ಶುಕ್ರವಾರ ಅಹೋರಾತ್ರಿ ನಿದ್ರಿಸಿ ಪ್ರತಿಭಟನೆ ನಡೆಸಿದರು.

ಪಂಬೆತ್ತಾಡಿ ಗ್ರಾಮದ ಚಂರ್ಬ ಮೇರ ಎಂಬುವರ ಜಮೀನನ್ನು ಸ್ಥಳೀಯ ನಿವಾಸಿ ಮೋನಪ್ಪ ಗೌಡ ಮತ್ತು ಇತರರು ಅಕ್ರಮವಾಗಿ ಮಂಜೂರುಗೊಳಿಸಿಕೊಂಡಿದ್ದಾರೆ ಎಂಬ ಆರೋಪದಡಿ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆಯಲ್ಲಿ ಆರು ಮಂದಿ ಇದ್ದು, ಅದರಲ್ಲಿ 70ವರ್ಷದ ವೃದ್ಧೆಯೂ ಇದ್ದಾರೆ. ಅವರ ಜಮೀನನ್ನು ಅಕ್ರಮ ಮಂಜೂರು ಮಾಡಿ ದಲಿತ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ಕುಟುಂಬವು 3ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಸಮಸ್ಯೆ ವಿಚಾರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.