ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನಡೆಸುವ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯಲ್ಲಿ ಚೈತ್ರಶ್ರಿ ಕೊಪ್ಪ ಇವರು ತೇರ್ಗಡೆಯಾಗಿರುತ್ತಾರೆ. ಈ ಪರೀಕ್ಷೆಯು ನವೆಂಬರ್ 24 ರಂದು ನಡೆದಿತ್ತು.
ಪ್ರಸ್ತುತ ಇವರು ಸಂತ ಫಿಲೋಮಿನಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಮಡಿಕೇರಿ ತಾಲುಕು ಚೆಂಬು ಗ್ರಾಮದ ಡಬ್ಬಡ್ಕ ಬಾಲಕೃಷ್ಣ ಕೊಪ್ಪ ಮತ್ತು ರೇವತಿ ಬಾಲಕೃಷ್ಣ ಇವರ ಪುತ್ರಿ.