ಅರಂತೋಡು ಪ್ರಾ.ಕೃ.ಪ ಸಹಕಾರಿ ಸಂಘ ಚುನಾವಣೆ| ಸಹಕಾರಿ ಭಾರತಿಯಿಂದ ಯುವವೈದ್ಯಗೆ ಮಣೆ

ಅರಂತೋಡು: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ಈ ಬಾರಿ ಜನಸ್ನೇಹಿ ಯುವ ವೈದ್ಯ
ಡಾ. ಲಕ್ಷ್ಮೀ ಶ ಕಲ್ಲುಮುಟ್ಲು ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ.

ಉಳಿದಂತೆ ಮಾಜಿ ಅಧ್ಯಕ್ಷ ಸಂತೋಷ ಕುತ್ತಮೊಟ್ಟೆ , ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ ಪ್ರಮುಖರ ಸಹಿತ ಚಂದ್ರಶೇಖರ ಚೋಡಿಪಣೆ , ಯಶೋಧರ ಪಿಂಗಾರತೋಟ , ಲೋಚನಾ ಕೊಳಲುಮೂಲೆ , ಪದ್ಮಯ್ಯ ಅಡ್ಯಡ್ಕ , ಚಂದ್ರಶೇಖರ ಆಚಾರ್ಯ ಎ . ಎಸ್ . , ಉದಯಕುಮಾರ ಉಳುವಾರು , ದಿನೇಶ , ಅಯ್ಯಣ್ಣ ಗೌಡ ಉಳುವಾರು , ಶ್ರೀಲತಾ ದೇರಾಜೆ ಅವರುಗಳನ್ನು ಕಣಕ್ಕಿಳಿಸಲು ಪಕ್ಷ ಮತ್ತು ಪರಿವಾರ ಪ್ರಮುಖರು ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಗುಂಪುಗಾರಿಕೆ, ಅಧಿಕಾರಕ್ಕೆ ಪೈಪೋಟಿ, ಬಂಡಾಯ ಮತ್ತಿತರ ಕಾರಣಗಳಿಂದ ಬೇಸತ್ತ ಪಕ್ಷ ಮತ್ತು ಪರಿವಾರ ನಾಯಕರು ಎಲ್ಲರನ್ನು ಸರಿದೂಗಿಸಿ ಮುನ್ನಡೆಸಬಲ್ಲ ಯುವ ವರ್ಚಸ್ಸಿನ ಹೊಸ ಮುಖಕ್ಕೆ ಮಣೆಹಾಕಿ ಅಂತರಿಕ ಸಮಸ್ಯೆ ಪರಿಹಾರಕ್ಕೆ ಮದ್ದರೆಯಲು ಈ ತೀರ್ಮಾನ ಕೈಗೊಂಡಿದೆ ಎಂದು ವಿಶ್ಲೇಷಣೆ ಕೇಳಿಬರುತಿದ್ದು, ವಿವಿಧ ಹೊಸ ಮುಖಗಳೊಂದಿಗೆ ಪರಿವರ್ತನೆಯತ್ತ ಹೆಜ್ಜೆಯಿಟ್ಟಿದೆ.