ಕುಕ್ಕೆ ಸುಬ್ರಹ್ಮಣ್ಯ : ಇಂದು ರಾತ್ರಿ(ಡಿ.6) ಪಂಚಮಿ ರಥೋತ್ಸವ| ಡಿ. 7ರಂದು ಬ್ರಹ್ಮರಥೋತ್ಸವ

ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿಯ ಮಹೋತ್ಸವಗಳು ನ.೨೭ ಕೊಪ್ಪರಿಗೆ ಏರುವುದರೊಂದಿಗೆ ಆರಂಭವಾಗಿದ್ದು, ಡಿ.6ರ ಇಂದು ರಾತ್ರಿ ಪಂಚಮಿ ರಥೋತ್ಸವ, ಹಾಗೂ ಡಿ.೭ ರಂದು ನಾಳೆ ಪ್ರಾತಃ ಕಾಲ 6.57ರ ವೃಶ್ಚಿಕ ಲಗ್ನದ ಶುಭ ಮುಹೂರ್ತದಲ್ಲಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.

ಚಂಪಾಷಷ್ಟಿ ಹಿನ್ನೆಲೆಯಲ್ಲಿ ಭಕ್ತರ ದಂಡು ಸುಬ್ರಹ್ಮಣ್ಯದತ್ತ ಹರಿದು ಬರುತ್ತಿದ್ದು, ಜಾತ್ರೆ ಮೆರುಗು ಇಮ್ಮಡಿಗೊಂಡಿದೆ. ಜಾತ್ರೆ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ ತೊಂದರೆಯಾಗದಂತೆ ಸಕಲ ಕ್ರಮ ಕೈಗೊಳ್ಳಲಾಗಿದೆ ಎಂದು ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರ ತಿಳಿಸಿದ್ದಾರೆ.