ಸುಳ್ಯ: ಬೇಸಿಗೆ ಆರಂಭಕ್ಕೆ ಮೊದಲೇ ಸುಳ್ಯದಲ್ಲಿ ನೀರಿನ ಬವಣೆ ಶುರುವಾಗಿದೆ. ನಗರದ ಬಹುತೇಕ ಜನವಸತಿ ಪ್ರದೇಶಗಳಿಗೆ ಹಾಗೂ ನಗರದೊಳಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ನಗರದಲ್ಲಿ ನೀರಿನ ಸಮಸ್ಯೆ ಮತ್ತೆ ಶುರುವಾಗಿದ್ದು ಇದರಿಂದ ಜನರಿಗೆ ಸಮಸ್ಯೆ ಉಂಟಾಗಿದೆ. ನಗರಕ್ಕೆ ನೀರು ಪೂರೈಕೆ ಮಾಡಲು ವೆಂಟೆಡ್ ಡ್ಯಾಂ ನಿರ್ಮಾಣ ಮಾಡಿದ್ದರೂ ವಿದ್ಯುತ್ ಸಮಸ್ಯೆ ಹಾಗೂ ಪಂಪ್ ಗಳ ಸರಿಯಾದ ನಿರ್ವಹಣೆ ಮಾಡುವಲ್ಲಿ ನ.ಪಂ ಆಡಳಿತ ಎಡವುತ್ತಿದೆ.
ಮಳೆಗಾಲ ಆರಂಭವಾದ ಬಳಿಕ ನೀರಿನ ಸಮಸ್ಯೆ ಅಷ್ಟೊಂದು ಕಂಡುಬಂದಿಲ್ಲ. ಆದರೆ ಇದೀಗ ಮಳೆ ಕಡಿಮೆಯಾದ ಕೂಡಲೃ ನೀರಿನ ಸಮಸ್ಯೆ ಉದ್ಭವಗೊಂಡಿದೆ. ಇದರಿಂದಾಗಿ ವ್ಯಾಪಾರಕ್ಕೂ ಸಮಸ್ಯೆ ಉಂಟಾಗಿದ್ದು ಸಂಭಂದಪಟ್ಟ ಅಧಿಕಾರಿಗಳು ಬದಲಿ ವ್ಯವಸ್ಥೆಯನ್ನು ಕೂಡಲೇ ಮಾಡಿ ಸಮಸ್ಯೆ ಬಗೆಹರಿಸಬೇಕಾಗಿದೆ.
ನ.ಪಂ ಆಡಳಿತದ ಚುಕ್ಕಾಣಿಯನ್ನು ನೂತನ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ವಹಿಸಿದ್ದು, ಇವರಾದರೂ ಈ ಸಮಸ್ಯೆಗೆ ಅಂತಿಮ ಮೊಳೆ ಹೊಡೆಯುತ್ತಾರಾ ಕಾದುನೋಡಬೇಕಿದೆ.