ಸುಬ್ರಹ್ಮಣ್ಯ: ತೇಪೆ‌ ಕಾಮಗಾರಿ ಕಳಪೆ

ಸುಬ್ರಹ್ಮಣ್ಯ: ಇಲ್ಲಿನ ಸುಬ್ರಹ್ಮಣ್ಯ – ಜಾಲ್ಸೂರು ರಾಜ್ಯ ಹೆದ್ದಾರಿಯ ಗುಂಡಿಗಳಿಗೆ ಲೋಕೋಪಯೋಗಿ ಇಲಾಖೆ ತೇಪೆ ಕಾಮಗಾರಿ ಆರಂಭಿಸಿದ್ದು ಅದೂ ಕಳಪೆಯಾಗಿದೆ.

ಸುಬ್ರಹ್ಮಣ್ಯದ ಇಂಜಾಡಿ ಸಮೀಪ ಡಾಂಬರು ಹಾಕಿದ್ದು ಕಾಮಗಾರಿ ನಡೆದ ಒಂದೇ ದಿನದಲ್ಲಿ ಜಲ್ಲಿ ಎದ್ದು ಹೋಗುತ್ತಿದೆ. ಅದೂ ಅಲ್ಲದೇ ಬಹುತೇಕ‌ ಗುಂಡಿಗಳನ್ನು ಬಿಟ್ಟು ಮೇಲಿಂದ ಮೇಲೆ ತೇಪೆ ಹಾಕಿರುವ ಆರೋಪ‌ ಕೇಳಿಬಂದಿದೆ. ಸಂಬಂಧಿಸಿದ ಇಲಾಖೆ ಈ ಕುರಿತು ಗಮನಹರಿಸಬೇಕಿದೆ.