ಪಂಜ: ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ತಾಂಬೂಲ ಪ್ರಶ್ನಾ ಚಿಂತನೆ

ಪಂಜ: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದೇವಳದ ಅಭಿವೃದ್ಧಿ ಕಾರ್ಯಗಳ ಚಿಂತನೆಯ ಹಿನ್ನಲೆಯಲ್ಲಿ ಒಂದು ದಿನದ ತಾಂಬೂಲ ಪ್ರಶ್ನಾ ಚಿಂತನೆ ನ.13 ರಂದು ದೈವಜ್ಞ ನಾರಾಯಣ ರಂಗಾ ಭಟ್ ಮಧೂರು ಅವರಿಂದ ನಡೆಯಿತು. ಬೆಳಿಗ್ಗೆ 10 ಗಂಟೆಗೆ ಆರಂಭಗೊಂಡ ಪ್ರಶ್ನಾ ಚಿಂತನೆ ಸಂಜೆ 5 ಗಂಟೆಗ ತನಕ ನಡೆಯಿತು.

ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಪರವಾಗಿ ಕೆಮ್ಮಿಂಜೆ ಕಾರ್ತಿಕ್ ತಂತ್ರಿಗಳು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯ ಸತ್ಯರಾಯಣ ಭಟ್ ಕಾಯಂಬಾಡಿ, ರಾಮಚಂದ್ರ ಭಟ್, ಧರ್ಮಣ್ಣ ನಾಯ್ಕ ಗರಡಿ, ಧರ್ಮಪಾಲ ಗೌಡ ಕಾಚಲ ಮರಕಡ, ಮಾಯಿಲಪ್ಪ ಗೌಡ ಎಣ್ಮೂರು, ಸಂತೋಷ್ ಕುಮಾರ್ ರೈ ಪಲ್ಲತ್ತಡ್ಕ, ಮಾಲಿನಿ ಕುದ್ದ, ಪವಿತ್ರ ಮಲ್ಲೆಟಿ, ಗೌರವ ಸಲಹೆಗಾರ ಮಹೇಶ್ ಕುಮಾರ್ ಕರಿಕ್ಕಳ, ಆನಂದ ಗೌಡ ಕಂಬಳ, ಪರಮೇಶ್ವರ ಬಿಳಿಮಲೆ, ಸೀಮೆಯ ಭಕ್ತಾದಿಗಳು, ಅರ್ಚಕರು ಹಾಗೂ ದೇವಳ ಸಿಬ್ಬಂದಿಗಳು ಉಪಸ್ಥಿತರಿದ್ದರು.