ಉಬರಡ್ಕ : ಬಸ್ – ಸ್ಕೂಟಿ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿನಿ ಮೃತ್ಯು

ಸಮಗ್ರ ನ್ಯೂಸ್:ಸುಳ್ಯ ತಾಲೂಕಿನ ಉಬರಡ್ಕ ಸೂಂತೋಡು ಬಳಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ರಚನಾ ಮೃತಪಟ್ಟಿದ್ದಾರೆ.

ಮೃತಳು ನಾರಾಯಣ ಕಾಡುತೋಟರವರ ಮಗಳು ರಚನಾ ಎಂದು ತಿಳಿದುಬಂದಿದೆ. ಇವರು ಪುತ್ತೂರು ವಿವೇಕಾನಂದ ಕಾಲೇಜಿನ ತೃತೀಯ ವರ್ಷದ ಬಿ.ಎ. ವಿದ್ಯಾರ್ಥಿನಿಯಾಗಿದ್ದಾರೆ.

ಜೊತೆಗೆ ಅವರ ತಂಗಿ ಅನನ್ಯ ಸಹಜೊತೆಯಲಿದ್ದರು. ಇವರು ಜೂನಿಯ‌ರ್ ಕಾಲೇಜ್ ವಿದ್ಯಾರ್ಥಿನಿ. ಅನನ್ಯ ಅವರ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು ಸದ್ಯ ಸುಳ್ಯದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಚನಾ ಅವರ ಅಂತ್ಯ ಸಂಸ್ಕಾರ ನಾಳೆ ಬೆಳಗ್ಗೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.