ಹಾಲೆಮಜಲು: ಪಹಣಿಗೆ ಆಧಾರ್ ಜೋಡಣೆ ಕಾರ್ಯಕ್ರಮ

ಗುತ್ತಿಗಾರು: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ರಿ. ಮಂಗಳೂರು ಪ್ರವರ್ತಕರು ಬ್ಯಾಂಕ್ ಆಫ್ ಬರೋಡ, ವಿಜಯ ಗ್ರಾಮ ಸಮಿತಿ ನಾಲ್ಕುರು, ಆತ್ಮ ರೈತ ಮಿತ್ರ ಸ್ವಸಹಾಯ ಸಂಘ ನಾಲ್ಕುರು ಇವುಗಳ ಆಶ್ರಯದಲ್ಲಿ ರೈತರ ಪಹಣಿಗೆ ಆಧಾರ್ ಜೋಡಣೆ ಕಾರ್ಯಕ್ರಮ ಹಾಲೆಮಜಲಿನ ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ನ. 5 ರಂದು ಜರಗಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಲ್ಕೂರು ವಿಡಿಸಿ ಅಧ್ಯಕ್ಷ ಡಿ.ಆ‌ರ್ ಉದಯಕುಮಾರ್‌ ವಹಿಸಿದ್ದರು. ಬ್ಯಾಂಕ್ ಆಫ್ ಬರೋಡ ಸುಬ್ರಮಣ್ಯ ಶಾಖೆಯ ವ್ಯವಸ್ಥಾಪಕ ವಿಶ್ರುತ್ ಕುಮಾರ್ ಕೆ.ಎಸ್ ದೀಪ ಬೆಳಗಿಸಿ ಉದ್ಘಾಟಿಸಿದರು.

ವೇದಿಕೆಯಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರ ಮೂಕಮಲೆ, ಆತ್ಮರೈತ ಮಿತ್ರ ಸ್ವಸಹಾಯ ಸಂಘದ ಅಧ್ಯಕ್ಷ ಶ್ರೀಮತಿ ಗೀತಾ ಕೆ.ಎಂ ಉಪಸಿತರಿದ್ದರು. ಗ್ರಾಮ ಆಡಳಿತ ಅಧಿಕಾರಿ ಭಾರತಿ ಕೆ.ವಿ. ಇಲಾಖೆ ಮಾಹಿತಿಯನ್ನು ನೀಡಿದರು ಹಾಗೂ ಬಹುತೇಕ ಮಂದಿ ರೈತರು ಪಹಣಿಗೆ ಆಧಾರು ಜೋಡಣೆ ಮಾಡಿಸಿಕೊಂಡರು. ವಿ.ಡಿ.ಸಿ.ಯ ಕಾರ್ಯದರ್ಶಿ ದಿನೇಶ್ ಹಾಲೆಮಜಲು ಸ್ವಾಗತಿಸಿ ವಂದಿಸಿದರು.