ಗುತ್ತಿಗಾರು: ಇಲ್ಲಿನ ಜಾಲ್ಸೂರು ಸುಬ್ರಹ್ಮಣ್ಯ ಹೆದ್ದಾರಿಯ ದೇರಪಜ್ಜನಮನೆ ಎಂಬಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದು ಕಾರಲ್ಲಿದ್ದವರು ಅಲ್ಪ ಗಾಯದೊಂದಿಗೆ ಪಾರಾದ ಘಟನೆ ನ.3 ರ ಸಂಜೆ ನಡೆದಿದೆ.
ಉದಯಕುಮಾರ್ ಕೊಯಿಲ ಎಂಬವರು ಕಾರಲ್ಲಿ ನಡುಗಲ್ಲು ಕಡೆ ತೆರಳುತ್ತಿದ್ದಾಗ ಕಾರು ರಸ್ತೆ ದಾಟಿ ವಿರುದ್ದ ದಿಕ್ಕಿಗೆ ತೆರಳಿ ನಿಯಂತ್ರಣ ತಪ್ಪಿ ದೇರಪ್ಪಜ್ಜನಮನೆ ಎಂಬಲ್ಲಿ ತೋಟದ ಬದಿಯ ಕಮರಿಗೆ ಬಿದ್ದಿದೆ. ಘಟನೆಯಲ್ಲಿ ಮಹಿಳೆಯೊಬ್ಬರಿಗೆ
ಅಲ್ಪ ಗಾಯಗಳಾಗಿದ್ದು ಸುಳ್ಯ ಕೆ.ವಿ.ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.