ಗುತ್ತಿಗಾರು: ಇಲ್ಲಿನ ಚತ್ರಪ್ಪಾಡಿ ನಿವಾಸಿ ಐಸಾಕ್ ಜೋಸೆಫ್ (ತಂಬಿ) ಇಂದು(ನ.3) ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಗುತ್ತಿಗಾರಿನಲ್ಲಿ ಹಲವಾರು ವರ್ಷಗಳ ಹಿಂದೆ ಬೆಸ್ಟ್ ಬಾರ್ ಆರಂಭಿಸಿ ಹಿರಿಯ ಉದ್ಯಮಿ ಎನಿಸಿಕೊಂಡಿದ್ದರು.
ಮೃತರು ಪತ್ನಿ ಅನಿಯಾಮ್ಮ, ಮಕ್ಕಳಾದ ಸುಪ್ರೀಂ ಕೋರ್ಟ್ ವಕೀಲರಾದ ಪ್ರಿನ್ಸ್ ಐಸಾಕ್, ಗುತ್ತಿಗಾರು ಕುರಿಯಾಕೋಸ್ ಶಾಲೆಯ ಶಿಕ್ಷಕಿ ಪ್ರೀಯ ಮ್ಯಾಥ್ಯೂ, ಕೇರಳ ಹೈ ಕೋರ್ಟ್ ವಕೀಲರಾದ ಜಸ್ಟಿನ್ ರವರ ಪತ್ನಿ ಪ್ರೀತಿ ಜಸ್ಟಿನ್ ರನ್ನು ಅಗಲಿದ್ದಾರೆ.