ಎಲಿಮಲೆ: ಕಾಲೇಜು ವಿದ್ಯಾರ್ಥಿನಿಗೆ ಮೆಸೇಜ್ ಮಾಡಿದ ಅನ್ಯಕೋಮಿನ ಯುವಕನಿಗೆ ಪೆಟ್ಟಿನ ಸುರಿಮಳೆ

ಎಲಿಮಲೆ: ಕಾಲೇಜು ವಿದ್ಯಾರ್ಥಿನಿಯೊಬ್ಬಾಕೆಗೆ ಮೊಬೈಲ್ ಮೂಲಕ ಅನ್ಯಕೋಮಿನ ಯುವಕನೋರ್ವ ಮೆಸೇಜ್ ಮಾಡಿದ್ದಾನೆ ಎಂದು ಆರೋಪಿಸಿ ಯುವಕರ ತಂಡವೊಂದು ಹಿಗ್ಗಾಮುಗ್ಗ ಥಳಿಸಿದ ಘಟನೆ ಎಲಿಮಲೆ ಸಮೀಪದ ತಳೂರಿನಲ್ಲಿ ನಡೆದಿದೆ.

ನಯಾಜ್ ಎಂಬ ಅಪ್ರಾಪ್ತ ಯುವಕನ ಮೇಲೆ ಹಲ್ಲೆ ನಡೆಸಿರುವುದಾಗಿ ವರದಿಯಾಗಿದ್ದು, ಏಟು ತಿಂದ ಯುವಕ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ. ಸ್ಥಳೀಯ ನಿವಾಸಿ ರಜತ್ ಎಂಬಾತ ಮಾತನಾಡಲಿಕ್ಕಿದೆಯೆಂದು ತನ್ನನ್ನು ಗ್ಯಾರೇಜಿಗೆ ಕರೆಸಿಕೊಂಡು, ತಾನು ಹೋದಾಗ ಗುಂಪು ಸೇರಿಸಿ ಹೊಡೆದಿರುವುದಾಗಿ ಹೇಳಲಾಗಿದೆ.

ಕಾಲೇಜು ಯುವತಿಗೆ ಮೆಸೇಜ್ ಮಾಡುವುದೇಕೆಂದು ತನ್ನನ್ನು ಪ್ರಶ್ನಿಸಿದಾಗ, ತಾನು ಯಾವುದೇ ಮೆಸೇಜ್ ಮಾಡಿಲ್ಲವೆಂದು ಹೇಳಿದರೂ ಕೇಳದೆ ಗುಂಪು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾಗಿಯೂ ನಯಾಜ್ ಸುಳ್ಯ ಆಸ್ಪತ್ರೆಯಲ್ಲಿ ಹೇಳಿಕೊಂಡಿದ್ದಾರೆಂದು ವರದಿಯಾಗಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.