ಪಂಜ: ಸರಕಾರಿ ಪದವಿಪೂರ್ವ ಕಾಲೇಜಿನ 2012-13ನೇ ಸಾಲಿನ ಪಿಯುಸಿ ಹಳೆ ವಿದ್ಯಾರ್ಥಿಗಳು ನಡೆಸಿಕೊಂಡು ಬರುವ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಅ. 27 ರಂದು ಸುಳ್ಯ ಅಡ್ಕಾರಿನ ವನಸುಮ ವನವಾಸಿ ವಿದ್ಯಾರ್ಥಿ ನಿಲಯ ನಡೆಯಿತು.
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿದುಕ್ತ ಚಾಲನೆ ನೀಡಿ ಅತಿಥಿಗಳ ಭಾಷಣ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ವನವಾಸಿ ವಿದ್ಯಾರ್ಥಿಗಳಿಗೆ ಸ್ನೇಹ ಸಮ್ಮಿಲನ ತಂಡ ದ ವತಿಯಿಂದ ಸಮವಸ್ತ್ರ ಹಾಗೂ ಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಈ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿ ದೇವಿ ಭಟ್, ಗುರುರಾಜ್ ಭಟ್, ಡಾ. ಮನೋಜ್, ದಾನಿಗಳಾದ ಸತ್ಯನಾರಾಯಣ ಭಟ್, ವ್ಯವಸ್ಥಾಪಕ ವೀರಮ್ಮ ಮತ್ತು ಕೈಲಾಸ್, ಸ್ನೇಹ ಸಮ್ಮಿಲನ ತಂಡದಿಂದ ಸುಮಂತ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹೇಮಲತಾ ಪ್ರಾರ್ಥಿಸಿ, ಸೀಮಾ ಸ್ವಾಗತಿಸಿ, ಜುಸೈನ ಇವರು ನಿರೂಪಿಸಿ, ಪ್ರವೀಣ್ ವಂದಿಸಿದರು. ಸ್ನೇಹ ಸಮ್ಮಿಲನ ತಂಡ ಪಂಜ ಇದರ ಸದಸ್ಯ ಲತೀಶ್, ರಾಜೇಶ್, ನೆಮಿರಾಜ್, ಪ್ರಶಾಂತ, ರಕ್ಷಿತ್, ನವೀನ್, ದಿವ್ಯಾ, ಪವಿತ್ರ ಆಚಾರ್ಯ, ಗೀತಾಂಜಲಿ, ಪವಿತ್ರ, ಅನಿತಾ, ಸುರಯ್ಯ, ರಮ್ಯಾ, ಮೂಕಾಂಬಿಕ ಇವರು ಉಪಸ್ಥಿತರಿದ್ದರು.