ಅ.16: ಗುತ್ತಿಗಾರಿನಲ್ಲಿ‌ ‘ತೆಲಿಕೆದ ಕಮ್ಮನೆ’

ಗುತ್ತಿಗಾರು: ಜೆಸಿಐ ಪಂಚಶ್ರೀ ಜೆಸಿ ಸಪ್ತಾಹ 2024ರ ಅಂಗವಾಗಿ ‘ನಗುವಿನ ಹಬ್ಬ’ ಪ್ರಯುಕ್ತ ರವಿ ರಾಮಕುಂಜ ತಂಡದಿಂದ ‘ತೆಲಿಕೆದ ಕಮ್ಮನೆ’ ಕಾರ್ಯಕ್ರಮ ಗುತ್ತಿಗಾರಿನ ದೇವಿಸಿಟಿ ಕಾಂಪ್ಲೆಕ್ಸ್ ನಲ್ಲಿ ಅ.16 ಬುಧವಾರದಂದು ಸಂಜೆ ಗಂಟೆ 7 ರಿಂದ ಪ್ರದರ್ಶನಗೊಳ್ಳಲಿದೆ.

ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ವಿನಂತಿಸಿದ್ದಾರೆ.