ಸುಳ್ಯ: ಹೃದಯಾಘಾತಕ್ಕೆ ಖಾಸಗಿ ಬಸ್ ನಿರ್ವಾಹಕ ಬಲಿ

ಸುಳ್ಯ: ಕಳೆದ ಕೆಲವು ವರ್ಷಗಳಿಂದ ಸುಳ್ಯದ ಖಾಸಗಿ ಬಸ್ ‘ಅವಿನಾಶ್’ನಲ್ಲಿ ನಿರ್ವಾಹಕನಾಗಿ ಆಗಿ ಸೇವೆ ಸಲ್ಲಿಸುತ್ತಿದ್ದ ಯುವಕನೊಬ್ಬ ಹಠಾತ್‌‌ ಹೃದಯಾಘಾತ ಸಂಭವಿಸಿ ಸಾವಿಗೀಡಾದ ಘಟನೆ ಇಂದು(ಅ. 14) ನಡೆದಿದೆ.

ಮೃತನನ್ನು ಆಲೆಟ್ಟಿ‌ ಗ್ರಾಮದ ಕುಂಚಡ್ಕ ನಿವಾಸಿ ಗುರುಪ್ರಸಾದ್(30) ಎಂದು ಗುರುತಿಸಲಾಗಿದೆ. ಇವರು ಬಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಹಠಾತ್ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ರಿಕ್ಷಾವೊಂದರಲ್ಲಿ ಆಸ್ಪತ್ರೆಗೆ ಕಳಿಸಿಕೊಡಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಅರಂಬೂರು ಬಳಿ ಆಟೋ ರಿಕ್ಷಾದಲ್ಲೇ ಕೊನೆಯುಸಿರು ಎಳೆದಿದ್ದಾರೆ ಎಂದು ತಿಳಿದು ಬಂದಿದೆ.

ಕೊರೊನಾ ಬಳಿಕ ಯುವಕರಲ್ಲಿ ಹೃದಯಾಘಾತದ ಸಮಸ್ಯೆಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕಾರಿ ಬೆಳವಣಿಗೆಯಾಗಿದ್ದು, ಇದೇ ಕಾರಣಕ್ಕೆ ಮತ್ತೊಂದು ಬಲಿಯಾಗಿರುವುದು ಕುಟುಂಬಸ್ಥರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.