ಪಂಜ: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ಎದುರಿನ “ಕದಿರು” ಗದ್ದೆ ಕೊಯ್ಲು ನಡೆಯಿತು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಪೈರು ಕೊಯ್ಯುವ ಮೂಲಕ ಚಾಲನೆ ನೀಡಿದರು.

ಶ್ರೀ ಪರಿವಾರ ಪಂಚಲಿಂಗೇಶ್ವರ ಐಟಿಐ ನಿಂತಿಕಲ್ಲು ಇಲ್ಲಿಯ ವಿದ್ಯಾರ್ಥಿಗಳು ಹಾಗೂ ತರಬೇತಿ ಅಧಿಕಾರಿಗಳು ಕದಿರು ಕೊಯ್ದು, ಭತ್ತ ಬೇರ್ಪಡಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.


ಈ ಸಂದರ್ಭದಲ್ಲಿ ಪರಿವಾರ ಪಂಚಲಿಂಗೇಶ್ವರ ಐಟಿಐ ನಿಂತಿಕಲ್ಲು ಇಲ್ಲಿನ ಕಿರಿಯ ತರಬೇತಿ ಅಧಿಕಾರಿ ದಯಾನಂದ ಕೆ.ಎಸ್, ಪ್ರಸನ್ನ ವೈ.ಟಿ., ಪ್ರಜ್ವಲ್ ಡಿ. ಜೆ., ಶ್ರೀಧರ ಎ. ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು ಅಲ್ಲದೇ ವ್ಯವಸ್ಥಾಪನ ಸಮಿತಿ ಸದಸ್ಯ ಸಂತೋಷ್ ರೈ , ಜೇಸಿಐ ಪಂಜ ಪಂಚಶ್ರೀಯ ಪೂರ್ವಾಧ್ಯಕ್ಷ ತೀರ್ಥಾನಂದ ಕೊಡೆಂಕಿರಿ, ಹರಿಯಪ್ಪ ಗೌಡ ಶೆಟ್ಟಿಗದ್ದೆ, ಕೃಷ್ಣಪ್ಪ ಜಳಕದಹೊಳೆ ಸಹಕರಿಸಿದರು.