ಮರಕತ: ನವರಾತ್ರಿ ಉತ್ಸವ; ಭಜನಾ ಸಂಕೀರ್ತನೆ

ಗುತ್ತಿಗಾರು.ಅ.8: ನಾಲ್ಕೂರು ಗ್ರಾಮದ ಮರಕತ ಶ್ರಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಶ್ರೀದೇವಿಗೆ ವಿವಿಧ ಧಾರ್ಮಿಕ ಕ್ರಿಯಾದಿಗಳೊಂದಿಗೆ ಗಣಪತಿ ಹವನ ಮಹಾಪೂಜೆ ವಾಹನ ಪೂಜೆ ಹಾಗೂ ಸಂಜೆ ಕ್ರಮವಾಗಿ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನ ಕಾರ್ಯಕ್ರಮವು ನಡೆಯುತ್ತಿದೆ.

ಭಜನಾ ಸಂಕೀರ್ತನೆಯಲ್ಲಿ ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ ನಡುಗಲ್ಲು, ಶ್ರೀದೇವಿ ಭಜನೆಮಂಡಳಿ ಮೆಟ್ಟಿನಡ್ಕ, ದುರ್ಗಾಶಕ್ತಿ ಭಜನಾ ಮಂಡಳಿ ಹಾಲೆಮಜಲು ಶ್ರೀ ಕೃಷ್ಣ ಭಜನಾ ಮಂಡಳಿ ಗುತ್ತಿಗಾರು ಇವರಿಂದ ಭಜನಾ ಸಂಕೀರ್ತನೆ ಕಾರ್ಯಕ್ರಮ ನಡೆಯಿತು. ಲಲಿತ ಪಂಚಮಿ ದಿನದಂದು ಶ್ರೀದೇವಿಗೆ ಮಹಾಪೂಜೆ, ಚಂಡಿಕಾ ಹೋಮ ನಡೆಯಿತು.

ಊರ ಪರವೂರ ಭಕ್ತಾದಿಗಳು ಆಗಮಿಸಿ ಶ್ರೀದೇವಿಯ ಪ್ರಸಾದವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ದೇವಸ್ಥಾನದ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.