ಗುತ್ತಿಗಾರು.ಅ. 8: ಲಯನ್ಸ್ ಕ್ಲಬ್ ಗುತ್ತಿಗಾರು ವತಿಯಿಂದ ನವಾನ್ನ ಭೋಜನ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮ ಅ.7ರಂದು ನಡೆಯಿತು.
ಲಯನ್ಸ್ ಅಧ್ಯಕ್ಷ ಕುಶಾಲಪ್ಪ ತುಂಬತ್ತಾಜೆ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಲಯನ್ II ಜಯರಾಮ ದೇರಪ್ಪಜ್ಜನ ಮನೆ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿ ನವನ್ನ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.
ಪ್ರಾಂತೀಯ ಅಧ್ಯಕ್ಷರು ಗಂಗಾಧರ ರೈ, ವಲಯ ಅಧ್ಯಕ್ಷರು ರೂಪಶ್ರೀ ಹಾಗೂ ಸುಳ್ಯ ಲಯನ್ಸ್ ಕ್ಲಬ್ ನ ಅಧ್ಯಕ್ಷರು ರಾಮಕೃಷ್ಣ ರೈ ಹಾಗೂ ಪಂಜದ ಅಧ್ಯಕ್ಷರು ಶಶಿಧರ ಪಳಂಗಾಯ ಉಪಸ್ಥಿತರಿದ್ದರು. ಗುತ್ತಿಗಾರಿನ ಎಲ್ಲಾ ಲಯನ್ ಸದಸ್ಯರು ಅವರ ಮನೆಯಿಂದ ತಂದ ಪದಾರ್ಥ ತಿಂಡಿ ತಿನಿಸುಗಳು ನವನ್ನ ಭೋಜನಕ್ಕೆ ಮೆರುಗನ್ನು ನೀಡಿತು.