ಗುತ್ತಿಗಾರು: ವರ್ತಕರ ಸಂಘದ ಮಹಾಸಭೆ, ಸನ್ಮಾನ

ಗುತ್ತಿಗಾರು, ಅ. 03: ವರ್ತಕರ ಸಂಘದ ಮಹಾಸಭೆ ಇಂದು ಗುತ್ತಿಗಾರಿನ ಪ. ಪಂಗಡ ಸಭಾಭವನದಲ್ಲಿ ‌ನಡೆಯಿತು. ಸಂಘದ ಅಧ್ಯಕ್ಷ ಶಿವರಾಮ ಕರುವಾಜೆ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿ ದೀಕ್ಷಾ ಎಲಿಮಲೆ, ದುರ್ಗಾ ಲಕ್ಷ್ಮಿ ಮೆಟ್ಟಿನಡ್ಕ, ಲಕ್ಷ ಕಡಪಳ ಅಡ್ಡನಪಾರೆ, ಹಾಗೂ ಹೋಟೆಲ್ ಉದ್ಯಮಿ ಮತ್ತು ಹಿರಿಯರಾದ ನೀಲಪ್ಪ ಗೌಡ ಬಳ್ಳಡ್ಕ ಇವರುಗಳನ್ನು ವರ್ತಕರ ಸಂಘದ ಪರವಾಗಿ ಗೌರವಿಸಲಾಯಿತು.

ನಂತರ ನೂತನ ಆಡಳಿತ ಮಂಡಳಿ ರಚಿಸುವ ಬಗ್ಗೆ ಅಧ್ಯಕ್ಷರು ಸಭೆಗೆ ತಿಳಿಸಿದಾಗ, ಸಭೆಯಲ್ಲಿದ್ದ ಸದಸ್ಯರು ಈಗ ಇರುವ ಆಡಳಿತ ಮಂಡಳಿಯನ್ನು ಮುಂದುವರಿಸುವಂತೆ ಸೂಚಿಸಿ ಚಪ್ಪಾಳೆ ಮೂಲಕ ಅನುಮೋದಿಸಿದರು. ಸಭಾಧ್ಯಕ್ಷರು ಸಂಘದ ಕಾರ್ಯಕ್ರಮಗಳ ಬಗ್ಗೆ ಮತ್ತು ಮುಂದಿನ ದಿನಗಳಲ್ಲಿ ಸಂಘದ ಸದಸ್ಯರುಗಳು ಯಾವ ರೀತಿಯಾಗಿ ಸಭೆಗೆ ಭಾಗವಹಿಸಬೇಕು ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಲಿಜೊಜೊಸ್, ಕಾರ್ಯದರ್ಶಿ ಬಿ.ವಿ .ರವಿಪ್ರಕಾಶ್ ಬಳ್ಳಡ್ಕ, ಜತೆ ಕಾರ್ಯದರ್ಶಿ ರಾಜೇಶ್ ಬಾಕಿಲ, ಖಜಾಂಜಿ ದಿನೇಶ್ ಹಾಲೆಮಜಲು ಉಪಸಿತರಿದ್ದರು.

ಉಪಾಧ್ಯಕ್ಷ ಲಿಜೊಜೊಸ್ ಸ್ವಾಗತಿಸಿ, ಕಾರ್ಯದರ್ಶಿ ಬಿ.ವಿ. ರವಿಪ್ರಕಾಶ್ ಬಳ್ಳಡ್ಕ ವಾರ್ಷಿಕ ವರದಿ ವಾಚಿಸಿದರು. ಖಜಾಂಜಿ ದಿನೇಶ್ ಹಾಲೆಮಜಲು ವಂದಿಸಿ, ನಿರ್ದೇಶಕ ವೆಂಕಟರಮಣ ಕೆಂಬ್ರೊಳಿ ನಿರೂಪಿಸಿದರು.