ಜಾಲ್ಸೂರು: ಕನಕಮಜಲು ಗ್ರಾಮದ ಕುಧ್ಕುಳಿ ಹಾಗೂ ಕೊರಂಬಡ್ಕ ಪರಿಸರದಲ್ಲಿ ಕೃಷಿ ತೋಟಗಳಿಗೆ ಆನೆ ಲಗ್ಗೆ ಇಟ್ಟು ಅಪಾರ ಪ್ರಮಾಣದಲ್ಲಿ ಕೃಷಿ ಬೆಳೆ ನಾಶಗೊಳಿಸಿದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.
ಕನಕಮಜಲು ಗ್ರಾಮದ ಲೋಹಿತ್ ಕುಮಾರ್ ಕುಧ್ಕುಳಿ ಅವರ ಕೃಷಿ ತೋಟದಲ್ಲಿ ಎಂಟು ತೆಂಗಿನ ಗಿಡ, ಒಂದು ದೊಡ್ಡ ತೆಂಗಿನ ಮರ, 25ಕ್ಕೂ ಅಧಿಕ ಬಾಳೆ, ಅಡಿಕೆ ಸಸಿಗಳಿನ್ನು ನಾಶಗೊಳಿಸಿದೆ.
ಅಲ್ಲದೇ ಗ್ರಾಮದ ಕೊರಂಬಡ್ಕ ಪದ್ಮನಾಭ ಗೌಡರ ಕೃಷಿ ತೋಟಕ್ಕೂ ದಾಳಿ ನಡೆಸಿದ್ದು, ಅಡಿಕೆ ತೆಂಗು, ಬಾಳೆಗಿಡಗಳನ್ನು ಧ್ವಂಸ ಮಾಡಿದೆ.