ಸುಬ್ರಹ್ಮಣ್ಯ: ಸ್ಕೌಟ್ಸ್ ಅಂಡ್ ಗೈಡ್ಸ್ ಪಯನಿಯರಿಂಗ್ ಶಿಬಿರ|ಗಾಂಧಿ ಜಯಂತಿಯ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

ಸುಬ್ರಹ್ಮಣ್ಯ, ಅ.2; ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಏನೆಕಲ್ಲು ಇದರ ಸಹಯೋಗದಲ್ಲಿ ಒಂದು ದಿನದ ಸ್ಕೌಟ್ಸ್ ಅಂಡ್ ಗೈಡ್ಸ್ ಪಯನಿಯರಿಂಗ್ ಶಿಬಿರವನ್ನು ಏನೆಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.

ಮಹಾವಿದ್ಯಾಲಯದ ರೋವರ್ಸ್ ರೇಂಜರ್ಸ್ ಘಟಕದ ವಿದ್ಯಾರ್ಥಿಗಳು ಪ್ರಾಥಮಿಕ ಶಾಲಾ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗೆ ಧ್ವಜ ನಿಯಮ ಹಾಗೂ ಸಾಹಸ ಶಿಬಿರಕ್ಕೆ ಬೇಕಾದ ತಯಾರಿಯ ಕುರಿತಾಗಿ ಮಾಹಿತಿಗಳನ್ನು ಹಂಚಿಕೊಂಡರು. ಜೊತೆಗೆ ಗಾಂಧಿ ಜಯಂತಿಯ ಪ್ರಯುಕ್ತ ಎಲ್ಲಾ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಶಿಬಿರದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಆರ್.ಎಸ್.ಎಲ್. ರಾಮ್ ಪ್ರಸಾದ್, ಎಸ್.ಆರ್.ಎಲ್. ಅಶ್ವಿನಿ ಮತ್ತು ಪ್ರಮೀಳ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಿಕಾ, ಗೈಡ್ ಕ್ಯಾಪ್ಟನ್ ರತ್ನಾವತಿ, ಸ್ಕೌಟ್ ಮಾಸ್ಟರ್ ಕಮಲ, ಸ್ಕೌಟ್ ಮಾಸ್ಟರ್ ಭರತ್ ಎಂ.ಕೆ., ಸ್ಕೌಟ್ ಮಾಸ್ಟರ್ ಕೀರ್ತಿರಾಜ್ ಉಪಸ್ಥಿತರಿದ್ದರು.