ನಿಂತಿಕಲ್ಲು: ಇಲ್ಲಿನ ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಲಾರ್ ಪಾಯಿಂಟ್ ಎಲೆಕ್ಟ್ರಾನಿಕ್ಸ್, ಫರ್ನೀಚರ್ಸ್ & ಪೈಂಟ್ ಸಂಸ್ಥೆಯು ವಿನೂತನ ಆಫರ್ ಮೂಲಕ ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯನ್ನು ನೀಡುತ್ತಿದ್ದು, ಇದೀಗ ಸತತ 6ನೇ ಬಾರಿಗೆ ‘ಲಕ್ಕೀ ಡ್ರಾ’ ಎಂಬ ವಿನೂತನ ಸ್ಕೀಮ್ ಆರಂಭಿಸುತ್ತಿದೆ.
ಈ ಯೋಜನೆಯು ಅ.12ರಿಂದ ಪ್ರಾರಂಭಗೊಳ್ಳಲಿದ್ದು, ಬಂಪರ್ ಬಹುಮಾನವಾಗಿ ಟಿ.ವಿ.ಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಗೆಲ್ಲಬಹುದಾಗಿದೆ. ಈ ಯೋಜನೆಯಲ್ಲಿ ಪ್ರತಿಯೊಬ್ಬ ಸದಸ್ಯರು ರೂ. 500 ರಂತೆ 18 ಕಂತುಗಳನ್ನು ಪಾವತಿಸಬೇಕಾಗಿದ್ದು, ಪ್ರತೀ 15 ದಿವಸಗಳಿಗೊಮ್ಮೆ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶವಿದೆ. ಡ್ರಾ ವಿಜೇತರು ಮುಂದಿನ ಕಂತು ಪಾವತಿಸಬೇಕಾಗಿಲ್ಲ.

ಪ್ರತೀ ತಿಂಗಳ 2 ಮತ್ತು 4ನೇ ಶನಿವಾರ ಸಂಜೆ ಗಂಟೆ 5.30ಕ್ಕೆ ಡ್ರಾ ನಡೆಯಲಿದ್ದು, ಸದಸ್ಯರು ಡ್ರಾ ಸಂದರ್ಭದಲ್ಲಿ ಭಾಗವಹಿಸಲು ಅವಕಾಶವಿದೆ. ಕಂತು ಪಾವತಿಸದ ಸದಸ್ಯರ ನಂಬರನ್ನು ಡ್ರಾಗೆ ಪರಿಗಣಿಸಲಾಗುವುದಿಲ್ಲ. ಲಕ್ಕೀ ಡ್ರಾ ಫಲಿತಾಂಶವನ್ನು ಎಸ್.ಎಂ.ಎಸ್, ವ್ಯಾಟ್ಸ್ಆಪ್ ಮೂಲಕ ತಿಳಿಸಲಾಗುವುದು ಹಾಗೂ ಆನ್ಲೈನ್ ಮೂಲಕ ನೋಂದಾವಣೆ ಮಾಡಿಕೊಳ್ಳಬಹುದು ಎಂದು ಸಂಸ್ಥೆಯ ಮಾಲಕರಾದ ಪ್ರಕಾಶ್ ಮಾಣಿಬೈಲು ತಿಳಿಸಿದ್ದಾರೆ.