ಬೆಳ್ಳಾರೆ: ಲೈಂಗಿಕ ದೌರ್ಜನ್ಯ ಆರೋಪ| ಜ್ಯೋತಿಷಿ ಪ್ರಸಾದ್ ಪಾಂಗಣ್ಣಾಯ ಬಂಧನ

ಬೆಳ್ಳಾರೆ: ಅಪ್ರಾಪ್ತೆಯ ಮೇಲೆ‌ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಪೋಕ್ಸೊ ಪ್ರಕರಣದಲ್ಲಿ ಕಾಣಿಯೂರು ಸಮೀಪದ ಜ್ಯೋತಿಷಿ ಪ್ರಸಾದ್ ಪಾಂಗಣ್ಣಾಯ ಎಂಬವರನ್ನು ಬೆಳ್ಳಾರೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನಲ್ಲಿ ಕೌನ್ಸಿಲಿಂಗ್ ಸಂಧರ್ಭದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಬೆಳಕಿಗೆ ಬಂದ ಕಾರಣ ಪ್ರಕರಣ ದಾಖಲಾಗಿದ್ದು, ಬೆಳ್ಳಾರೆ ಪೊಲೀಸರು ಸೆ.19ರ ಬೆಳಗ್ಗಿನ ಜಾವ ಪ್ರಸಾದ್ ಪಂಗಣ್ಣಾಯರನ್ನು ಅವರ ಮನೆಯಲ್ಲಿ ಬಂಧಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ದಕ್ಷಿಣ ಕನ್ನಡದ ಹಲವು ಕಡೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವ ಪ್ರಸಾದ್ ಪಾಂಗಣ್ಣಾಯರವರು ಕಾಣಿಯೂರು ಸಮೀಪದ ಬೆಳಂದೂರು ನಿವಾಸಿ ಎಂದು ತಿಳಿದುಬಂದಿದೆ.