ಸುಬ್ರಹ್ಮಣ್ಯ: ಉ. ಸ.ಹಿ. ಪ್ರಾಥಮಿಕ ಶಾಲೆ ಬಿಳಿನೆಲೆ – ಕೈಕಂಬಕ್ಕೆ ಅಮೃತ ಮಹೋತ್ಸವ ಸಂಭ್ರಮ| ಅಧ್ಯಕ್ಷರಾಗಿ ವಿಜಯ್ ನಡುತೋಟ, ಕಾರ್ಯಾಧ್ಯಕ್ಷರಾಗಿ ಪ್ರದೀಪ್ ಕಳಿಗೆ ಆಯ್ಕೆ

ಸುಬ್ರಹ್ಮಣ್ಯ: ಸರಕಾರಿ ಉನ್ನತೀಕರೀಸಿದ ಹಿರಿಯ ಪ್ರಾಥಮಿಕ ಶಾಲೆ ಕೈಕಂಬಕ್ಕೆ 75 ವಸಂತ ತುಂಬಿದ್ದು ಅಮೃತ ಮಹೋತ್ಸವ ಆಚರಿಸುವ ಹೊಸ್ತಿಲಲ್ಲಿದೆ. ಗ್ರಾಮದ ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯನ್ನು ನೀಡಿದ ಸಂಸ್ಥೆಯ ಅಮೃತ ಮಹೋತ್ಸವವನ್ನು ನಿರ್ವಹಿಸಲು ಅಮೃತ ಮಹೋತ್ಸವ ಸಮಿತಿಯನ್ನು ರಚಿಸಲಾಯಿತು.

ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಪ್ರಸಾದ್ ಕಳಿಗೆ, ಅಧ್ಯಕ್ಷರಾಗಿ ವಿಜಯ್ ಕುಮಾರ್ ನಡುತೋಟ ಕಾರ್ಯಾಧ್ಯಕ್ಷರಾಗಿ ಪ್ರದೀಪ್ ಕಳಿಗೆ, ಪ್ರಧಾನ ಕಾರ್ಯದರ್ಶಿಯಾಗಿ ಮುಖ್ಯ ಶಿಕ್ಷಕಿ ಪವಿತ್ರ ಎ, ಸಂಚಾಲಕರಾಗಿ ಮುರಳಿಧರ ಎರ್ಮಾಯಿಲ್,
ಖಜಾಂಜಿ ಯಾಗಿ ಪ್ರವೀಣ್ ಕುಮಾರ್ ಕೆ ಎಸ್‌ ನೇಮಕಗೊಂಡರು.

ಕಾರ್ಯಕ್ರಮದ ಗೌರವ ಸಲಹೆಗಾರರಾಗಿ ಲಕ್ಷ್ಮಣ ಗೌಡ ನಡುತೋಟ, ರೇಗಪ್ಪ ಗೌಡ ಹೊಸೊಕ್ಲು, ಯಶವಂತ ಕಳಿಗೆ , ಪರಶುರಾಮ ಪಳ್ಳಿಗದ್ದೆ, ವಾಡ್ಯಪ್ಪ ಎರ್ಮಾಯಿಲ್ ನೇಮಕಗೊಂಡರು. ಉಪಾಧ್ಯಕ್ಷರುಗಳಾಗಿ ಸೌಮ್ಯ ಮೂಲೆಮನೆ , ರುಕ್ಮಯ ಕೋಟೆಬಾಗಿಲು , ರಾಮಚಂದ್ರ ಮಾಲೆಂಗ್ರಿ ಕಾರ್ಯದರ್ಶಿಗಳಾಗಿ ಚಿದಾನಂದ ಕಳಿಗೆ ಪಳ್ಳಿಗದ್ದೆ ಹಾಗೂ ಯಸೋಧರ ಬಾಲಡ್ಕ ಸಂಘಟಣಾ ಕಾರ್ಯದರ್ಶಿಗಳಾಗಿ ಕಿರಣ್ ಕುಮರಕೃಪಾ ಹಾಗೂ ತಿಲಕ್ ಕೋಟೆಬಾಗಿಲು ಇವರುಗಳನ್ನು ಆಯ್ಕೆ ಮಾಡಲಾಯಿತು.