ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯದ 2024-25 ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯು ಸೆ.12 ರಂದು ನಡೆಯಿತು.
ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ದಿಶಾಂತ್ ಎಸ್.ಎಲ್.ಅಂತಿಮ ಬಿ.ಎ.ಉಪಾಧ್ಯಕ್ಷರಾಗಿ ಕಲ್ಪನಾ ವೈ.ಅಂತಿಮ ಬಿ.ಎ. ಹಾಗೂ ಕಾರ್ಯದರ್ಶಿಯಾಗಿ ಕಾರ್ತಿಕ್ ಯು ದ್ವಿತೀಯ ಬಿ.ಕಾಂ ಅವರು ಆಯ್ಕೆಯಾಗಿರುತ್ತಾರೆ.
ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ.ಟಿ.ಅಭಿನಂದಿಸಿದರು.ವಿದ್ಯಾರ್ಥಿ ಸಂಘದ ಸಂಯೋಜಕ ಡಾ. ಪ್ರಸಾದ.ಯನ್ ಹಾಗೂ ಸದಸ್ಯರಾದ ಶಿವಪ್ರಸಾದ್ ಎಸ್ ಹಾಗೂ ಅಶ್ವಿನಿ ಎಸ್ ಎನ್ ಉಪಸ್ಥಿತರಿದ್ದರು.