ಸುಳ್ಯ :ಶಿಕ್ಷಕರ ದಿನಾಚರಣೆ – ನೇಷನ್ ಬಿಲ್ಡ‌ರ್ ಅವಾರ್ಡ್ ಪ್ರದಾನ

ಸುಳ್ಯ: ರೋಟರಿ ಕ್ಲಬ್ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಸುಳ್ಯದ 4 ಮಂದಿ ಶಿಕ್ಷಕರಿಗೆ ನೇಷನ್ ಬಿಲ್ಡರ್ ಅವಾರ್ಡ್ ಸೆ.12ರಂದು ಪ್ರದಾನ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ನ ಅಧ್ಯಕ್ಷೆ ರೊ.ಯೋಗಿತಾ ಗೋಪಿನಾಥ್ ವಹಿಸಿದ್ದರು. ಸುಳ್ಯ ನೆಹರು ಮೆಮೋರಿಯಲ್ ಪ.ಪೂ.ಕಾಲೇಜಿನ ಕನ್ನಡ ಉಪನ್ಯಾಸಕಿ ಕು.ಬೇಬಿ ವಿದ್ಯಾ ಪಿ.ಬಿ.,ಬೆಳ್ಳಾರೆ ಜ್ಞಾನ ಗಂಗಾ ಪಬ್ಲಿಕ್ ಸ್ಕೂಲ್ ನ ಶಿಕ್ಷಕಿ ಸುಜಾತ ಪ್ರಸನ್ನ ಕಲ್ಲಾಜೆ, ರೋಟರಿ ಪ್ರೌಢ ಶಾಲೆಯ ಶಿಕ್ಷಕಿ ನಳಿನಾಕ್ಷಿ ಕಲ್ಮಡ್ಕ, ರೋಟರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ರಶ್ಮಿ ಎಸ್.ಎನ್ ಪುರಸ್ಕಾರಕ್ಕೆ ಭಾಜನರಾದರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ರೊ|ಡಾ.ರಾಮ್ ಮೋಹನ್, ಮುಖ್ಯ ಅತಿಥಿ ನಿವೃತ್ತ ಪ್ರಾಧ್ಯಾಪಕ ರೊ.ಬೆಳ್ಯಪ್ಪ ಗೌಡ, ನಿಕಟ ಪೂರ್ವ ಅಧ್ಯಕ್ಷ ರೊ.ಆನಂದ ಖಂಡಿಗ, ಕಾರ್ಯದರ್ಶಿ ರೊ. ಡಾ.ಹರ್ಷಿತ ಪುರುಷೋತ್ತಮ ಹಾಗೂ ರೋಟರಿ ಕ್ಲಬ್ ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಸನ್ಮಾನ ಸಮಾರಂಭವನ್ನು Teach Chairman ರೊ. ಚಂದ್ರಶೇಖರ ಪೇರಾಲು ಹಾಗೂ Vocational ಛೇರ್ಮನ್ ರೊ. ಗಿರಿಜಾ ಶಂಕರ ತುದಿಯಡ್ಕ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಆಗಮಿಸಿದ ಎಲ್ಲಾ ಶಿಕ್ಷಕರನ್ನು ಗೌರವಿಸಲಾಯಿತು. ರೊ.ಚಂದ್ರಮತಿ ಪ್ರಾರ್ಥಿಸಿ, Wins Chairman ರೊ.ವೆಂಕಟೇಶ್‌ ಸನ್ಮಾನಿತರ ಪರಿಚಯ ವಾಚಿಸಿದರು. ರೊ. ಯೋಗಿತಾ ಗೋಪಿನಾಥ್ ಸ್ವಾಗತಿಸಿ, ರೊ.ಡಾ. ಹರ್ಷಿತ ಪುರುಷೋತ್ತಮ ವಂದಿಸಿದರು.