ಎಸ್‌ಡಿಪಿಐ ಸುಳ್ಯ ನೂತನ ನಾಯಕರ ಸಮಾವೇಶ; ತರಬೇತಿ ಶಿಬಿರ

ಸವಣೂರು, ಸೆ 9: ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಸುಳ್ಯ ವಿಧಾನಸಭಾ ಕ್ಷೇತ್ರದ ನಾಯಕರುಗಳ ಸಮಾವೇಶವು ಸವಣೂರಿನ ಅಂಬೇಡ್ಕರ್ ಭವನದಲ್ಲಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಬ್ದುಲ್ ರಝಾಕ್ ಕೆನರಾ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು ರವರು ಮಾತನಾಡಿ ಪಕ್ಷದ ನೂತನ ನಾಯಕತ್ವ ವಹಿಸಿಕೊಂಡ ನಾಯಕರ ಜವಾಬ್ದಾರಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ರವರು ಮಾತನಾಡಿ ಹೊಸ ನಾಯಕರು ಪಕ್ಷವನ್ನು ಇನ್ನಷ್ಟು ಕಡೆಗಳಿಗೆ ವಿಸ್ತರಿಸಬೇಕು ಮುಂಬರುವ ಚುನಾವಣೆಗಾಗಿ ಕಾರ್ಯಕರ್ತರನ್ನು ತಳಮಟ್ಟದಿಂದಲೇ ಸಂಘಟಿಸಬೇಕೆಂದು ಕರೆ ನೀಡಿದರು.

ವಿಧಾನಸಭಾ ಕ್ಷೇತ್ರ ಸಮಿತಿಯ ನೂತನ ಅಧ್ಯಕ್ಷ ಅಬ್ದುಲ್ ರಜಾಕ್ ಕೆನರಾ ರವರು ಮಾತನಾಡಿ ನಮ್ಮ ವಿಧಾನಸಭಾ ವ್ಯಾಪ್ತಿಯಲ್ಲಿ ಪ್ರತಿಯೊಂದು ಗ್ರಾಮಸಭೆಗಳಲ್ಲೂ ಪಕ್ಷವನ್ನು ಸಂಘಟಿಸಲು ನಾಯಕರು ಕಾರ್ಯಕರ್ತರ ಜೊತೆಗೂಡಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಕಲಾಂ ರವರು ಮಾತನಾಡಿ ನೂತನ ನಾಯಕರಿಗೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬ್ರಾಂಚ್ ಸಮಿತಿ, ಗ್ರಾಮ ಸಮಿತಿ, ಬ್ಲಾಕ್ ಸಮಿತಿ, ವಿಧಾನಸಭಾ ಕ್ಷೇತ್ರ ಸಮಿತಿ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸವಣೂರು ಗ್ರಾಮ ಪಂಚಾಯತ್ ಸದಸ್ಯ ರಫೀಕ್ ಎಂ.ಎ ಉಪಸ್ಥಿತರಿದ್ದರು.

ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ರಫೀಕ್ ನೆಲ್ಯಾಡಿ ಯವರು ಸ್ವಾಗತಿಸಿದರು. ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಶರೀಫ್ ನಿಂತಿಕಲ್ಲುರವರು ಧನ್ಯವಾದಗೈದರು. ಜೊತೆ ಕಾರ್ಯದರ್ಶಿ ರಫೀಕ್ ಎಂ.ಎಸ್‌. ನಿರೂಪಿಸಿದರು.