ಕರಿಕ್ಕಳ: ಶಾಸಕಿ ಭಾಗೀರಥಿ ಮುರುಳ್ಯರಿಂದ ನಿಡ್ವಾಳ ವಿಷ್ಣು ಸೇವಾ ಶಕ್ತಿ ಸಂಘಟನೆಯ ಟಿ ಶರ್ಟ್ ಬಿಡುಗಡೆ

ಕರಿಕ್ಕಳ: ನಿಡ್ವಾಳ ವಿಷ್ಣು ಸೇವಾ ಶಕ್ತಿ ಸಂಘಟನೆಯ ಟಿ ಶರ್ಟ್ ಅನ್ನು ಶಾಸಕರಾದ ಕು. ಭಾಗೀರಥಿ ಮುರುಳ್ಯ ರವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಹಿರಿಯರಾದ ಡಾ. ರಾಮಯ್ಯ ಭಟ್, ಶಿವರಾಮಯ್ಯ, ಚಂದ್ರಶೇಖರ ಶಾಸ್ತ್ರಿ, ದಯಾನಂದ ಮೇಲ್ಮನೆ, ಲೋಕೇಶ್ ಬರೆಮೇಲು, ಕಾರ್ಯಪ್ಪ ಗೌಡ ಚಿದ್ಗಲ್, ಲಿಗೋಧರ ಆಚಾರ್ಯ, ನಾರಾಯಣ ಕೃಷ್ಣ ನಗರ, ವಿಜಯಲಕ್ಷ್ಮಿ ಜಳಕದ ಹೊಳೆ, ನಿಡ್ವಾಳ ವಿಷ್ಣು ಸೇವಾ ಶಕ್ತಿ ಸಂಘದ ಅಧ್ಯಕ್ಷ ಲತೀಶ್ ಅಲೆಂಗಾರ, ಕಾರ್ಯದರ್ಶಿ ಪವನ್ ಅತ್ಯಡ್ಕ ಹಾಗೂ ವಿಷ್ಣು ಸೇವಾ ಶಕ್ತಿ ಸಂಘದ ಸದಸ್ಯರುಗಳು ಮತ್ತು ಊರವರು ಉಪಸ್ಥಿತರಿದ್ದರು.