ಕಡಬ: SDPI ಬ್ಲಾಕ್ ಪ್ರತಿನಿಧಿ ಸಭೆ, ಆಂತರಿಕ ಚುನಾವಣೆ| ಅಧ್ಯಕ್ಷರಾಗಿ ಬಶೀರ್ ಕಡಬ ಆಯ್ಕೆ

ಕಡಬ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ಬ್ಲಾಕ್ ಪ್ರತಿನಿಧಿ ಸಭೆಯು ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಬ್ದುಲ್ ರಝಾಕ್ ಕೆನರಾ ರವರ ಅಧ್ಯಕ್ಷತೆಯಲ್ಲಿ ಸುಳ್ಯದಲ್ಲಿ ನಡೆಯಿತು.

ಎಸ್‌ಡಿಪಿಐ ಕಡಬ ಬ್ಲಾಕ್ ನ 2024-27 ನೇಯ ಸಾಲಿಗೆ ಪದಾಧಿಕಾರಿಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಬಶೀರ್ ಕಡಬ, ಕಾರ್ಯದರ್ಶಿಯಾಗಿ ಸಿದ್ದೀಕ್ ನೆಲ್ಯಾಡಿ, ಕೋಶಾಧಿಕಾರಿಯಾಗಿ ರಮ್ಲಾ ಸನ್ ರೈಸ್, ಉಪಾಧ್ಯಕ್ಷರಾಗಿ ಹಾರಿಸ್ ಕಲಾರ, ಜೊತೆ ಕಾರ್ಯದರ್ಶಿಯಾಗಿ ನಬಿಶಾನ್ ಕಲಾರ, ಸದಸ್ಯರಾಗಿ ಬಶೀರ್ ಅತೂರು, ಅಬ್ದುಲ್ ರಝಾಕ್ ಕೋಲ್ಪೆ ಯವರು ಆಯ್ಕೆಯಾದರು.

ಚುನಾವಣೆ ಪ್ರಕ್ರಿಯೆಯನ್ನು ಆರ್.ಓ. ಹಮೀದ್ ಮರಕ್ಕಡ, ಸಹಾಯಕ
ಅಬ್ದುಲ್ ರಝಾಕ್ ಕೆನರಾ, ಎಸ್.ಡಿ.ಪಿ.ಐ. ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಸುಹೈಲ್ ಸುಳ್ಯ ಕಾರ್ಯನಿರ್ವಹಿಸಿದರು.