ಸುಬ್ರಹ್ಮಣ್ಯ: ಇಲ್ಲಿನ ಸಾರ್ವಜನಿಕ ಗಣೇಶೋತ್ಸವದಲ್ಲಿ ಪೂಜಿಸುವ ಗಣಪತಿ ಮೂರ್ತಿ ಎಲ್ಲರ ಗಮನ ಸೆಳೆದಿದೆ. ಇದಕ್ಕೆ ಕಾರಣ, ಬ್ಯಾಂಕ್ ಮ್ಯಾನೇಜರ್ ಕೃಷ್ಣಪ್ರಸಾದ್ ಇದನ್ನು ನಿರಂತರ 24 ವರ್ಷಗಳಿಂದ ತಯಾರಿಸಿಕೊಡುವುದು.
ಕಳೆದ 24 ವರ್ಷದಿಂದ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿರುವ ಕೃಷ್ಣಪ್ರಸಾದ್ ತಮ್ಮ ಸೇವಾವಧಿಯಲ್ಲಿ ಇಷ್ಟರ ವರೆಗೂ ಗಣಪತಿ ಮೂರ್ತಿ ರಚನೆಯನ್ನು ಬಿಟ್ಟುಕೊಟ್ಟಿಲ್ಲ. ಬದಲಾಗಿ ಇದು ಗಣೇಶನಿಗೆ ಮತ್ತು ತನ್ನೂರಿಗೆ ಸಲ್ಲಿಸುವ ಸೇವೆ ಎಂದು ನೆರವೇರಿಸುತ್ತಾ ಬಂದಿದ್ದಾರೆ.
ಈ ಬಾರಿ ಕೂಡ ಸಹ ಬ್ಯಾಂಕ್‌ಗೆ ರಜೆ ಮಾಡಿ ಹುಟ್ಟೂರಿಗೆ ಆಗಮಿಸಿ ಮೂರ್ತಿ ರಚನಾ ಕಾರ್ಯ ಮಾಡಿದ್ದಾರೆ. ಸುಬ್ರಹ್ಮಣ್ಯದ ಸಾರ್ವಜನಿಕ ಗಣೇಶೋತ್ಸವದಲ್ಲಿ ಪೂಜಿಸುವ ಗಣಪತಿಯನ್ನು ಕಳೆದ 29 ವರ್ಷಗಳಿಂದ ಇವರೇ ರಚಿಸಿಕೊಡುತ್ತಿದ್ದಾರೆ. ಇದು ಇವರು ತಯಾರಿಸುವ ಅತೀ ದೊಡ್ಡ ಮಣ್ಣಿನ ಮೂರ್ತಿಯಾಗಿದೆ.