ಎಸ್‌ಡಿಪಿಐ ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿ ಮಾಸಿಕ ಸಭೆ

ಸುಳ್ಯ, ಸೆ.6: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ, ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಮಾಸಿಕ ಸಭೆಯು ಅಬ್ದುಲ್ ರಝಾಕ್ ಕೆನರ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರ್ ಹಾಗೂ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ಯವರ ಉಪಸ್ಥಿತಿಯಲ್ಲಿ ಅಂಬೇಡ್ಕರ್ ಭವನ ಮಾಂತೂರಿನಲ್ಲಿ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಧ್ಯಕ್ಷ ಅಬ್ದುಲ್ ರಜಾಕ್ ಕೆ. ಅವರು ಪಕ್ಷದ ನಾಯಕರುಗಳ ಸಮಾವೇಶವನ್ನು ನಡೆಸುವ ಕುರಿತು ಪ್ರಸ್ತಾಪಿಸಿದರು.
ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಹಾಗೂ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿಯವರು ಮಾತನಾಡಿ ನೂತನ ನಾಯಕರುಗಳಿಗೆ ಶುಭಾಶಯ ಕೋರಿ ಪಕ್ಷದ ಬೆಳವಣಿಗೆಗೆ ಹಾಗೂ ವಿಸ್ತರಣೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಸಲಹೆ ಸೂಚನೆಗಳನ್ನು ನೀಡಿದರು.

ಈ ವೇಳೆ ಬೇರೆ ಬೇರೆ ವಿಭಾಗಕ್ಕೆ ಉಸ್ತುವಾರಿಗಳನ್ನು ನೇಮಿಸಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್, ಅಬ್ದುಲ್ ಕಲಾಂ ಸುಳ್ಯ, ಜೊತೆ ಕಾರ್ಯದರ್ಶಿ ರಫೀಕ್ ಎಂ.ಎಸ್., ಕೋಶಾಧಿಕಾರಿ ಅಬ್ದುಲ್ ರೆಹಮಾನ್ ಬೆಳ್ಳಾರೆ, ಸಮಿತಿಯ ಸದಸ್ಯ ಬಾಬು ಎನ್. ಸವಣೂರು, ಬೆಳ್ಳಾರೆ ಬ್ಲಾಕ್ ಅಧ್ಯಕ್ಷ ರಫೀಕ್ ಎಂ.ಎ., ಸವಣೂರು ಕಡಬ ಬ್ಲಾಕ್ ಕಾರ್ಯದರ್ಶಿ ಸಿದ್ದೀಕ್ ನೆಲ್ಯಾಡಿ, ಸುಳ್ಯ ಬ್ಲಾಕ್ ಕಾರ್ಯದರ್ಶಿ ಸುಹೈಲ್ ಸುಳ್ಯ, ಸಿದ್ದೀಕ್ ಅಲೆಕ್ಕಾಡಿ ಉಪಸ್ಥಿತರಿದ್ದರು.

ವಿಧಾನಸಭಾ ಸಮಿತಿಯ ಕಾರ್ಯದರ್ಶಿ ರಫೀಕ್ ನೆಲ್ಯಾಡಿಯವರು ಸ್ವಾಗತಿಸಿ, ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್ ರವರು ವಂದನಾರ್ಪಣೆ ಮಾಡಿದರು.