ಪಂಜ, ಸೆ.6: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಕದಿರು ಗದ್ದೆಯಲ್ಲಿ ದೇಗುಲದ ಅರ್ಚಕ ನರೇಶ್ ಕೃಷರವರು ಇಂದು ಬೆಳಗ್ಗೆ ಪೂಜೆ ಸಲ್ಲಿಸಿ ಕದಿರು ತೆಗೆದರು.


ಈ ಸಂದರ್ಭದಲ್ಲಿ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ಹುರ್, ವ್ಯವಸ್ಥಾಪನ ಸಮಿತಿ ಸದಸ್ಯೆ ಮಾಲಿನಿ ಕುದ್ವ, ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ರಜಿತ್ ಭಟ್ ಪಂಜಬೀಡು, ಪಂಜ ಪರಿಸರದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಕೇಶವ ಕುದ್ವ, ಜೆಸಿಐ ಕುಸುಮಾಧರ ಕಕ್ಕ್ಯಾನ, ಅಲ್ಪೆ ಕೋಡಿ ವಸಂತ ಉಪಸ್ಥಿತರಿದ್ದರು.