ಸುಳ್ಯ: ಇಲ್ಲಿನ ಕಾಂತಮಂಗಲ ಬಳಿ ಪಯಸ್ವಿನಿ ನದಿಗೆ ಹಾರಿದ್ದ ಯುವಕ ಶವವಾಗಿ ಸಿಕ್ಕಿದ್ದಾನೆ. ಮೃತಪಟ್ಟ ವ್ಯಕ್ತಿಯನ್ನು ಅಜ್ಜಾವರ ಗ್ರಾಮದ ಅಡ್ಕ ನಿವಾಸಿ ಸಿನಾನ್ (24 ವರ್ಷ) ಎಂದು ಗುರುತಿಸಲಾಗಿದೆ.
ಸಿನಾನ್ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಹೇಳಲಾಗುತ್ತಿದೆ. ಈ ಹಿಂದೆಯೂ ಆತ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಸೋಮವಾರ ಸಂಜೆ ವೇಳೆಗೆ ಈತ ಕಾಂತಮಂಗಲ ಸೇತುವೆಯಿಂದ ನದಿಗೆ ಧುಮುಕಿದ್ದು ಆತನಿಗಾಗಿ ಹುಡುಕಾಟ ನಡೆಯುತ್ತಿತ್ತು.