ತಿಮ್ಮಪ್ಪ ಗೌಡರವರಿಗೆ ಪಂಜ ವಲಯ ಕಾಂಗ್ರೆಸ್, ಊರಿನ ದಾನಿಗಳಿಂದ ಸಂಗ್ರಹಿಸಿದ ಹಣ ಹಸ್ತಾಂತರ

ಪಂಜ: ಐವತ್ತೋಕ್ಲು ಗ್ರಾಮದ ಬೊಳ್ಳಾಜೆ ತಿಮ್ಮಪ್ಪ ಗೌಡರ ಪತ್ನಿಯ ಅಕಾಲಿಕ ಮರಣದಿಂದ ಕಂಗೆಟ್ಟ ತಿಮ್ಮಪ್ಪ ಗೌಡರಿಗೆ ಬೊಳ್ಳಾಜೆ ಲಕ್ಷ್ಮಣ ಗೌಡರ ನೇತೃತ್ವದಲ್ಲಿ ಪಂಜ ವಲಯ ಕಾಂಗ್ರೆಸ್ ಮತ್ತು ಊರಿನ ದಾನಿಗಳಿಂದ ಸಂಗ್ರಹಿಸಿದ ಹಣವನ್ನು ಈ ದಿನ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಪಂಜ ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮಣ ಬೊಲ್ಲಾಜೆ, ಚಿನ್ನಪ್ಪ ಸಂಕಡ್ಕ, ದಿನೇಶ್ ಪುಂಡಿಮನೆ, ಕುಸುಮಾದರ ಕೆರೆಯಡ್ಕ, ಸತೀಶ್ ಪೂಜಾರಿ ಮನೆ ಉಪಸ್ಥಿತರಿದ್ದರು.