ಐವರ್ನಾಡು: ದೇರಾಜೆ ರಸ್ತೆ ಅಭಿವೃದ್ಧಿಗೆ ಅನುದಾನವನ್ನು ದೊರಕಿಸಿ ಕೊಡುವುವಂತೆ ಶಾಸಕಿಗೆ ಮನವಿ

ಐವರ್ನಾಡು: ದೇರಾಜೆ ರಸ್ತೆ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ ಅಡಿಯಲ್ಲಿ ಅನುದಾನವನ್ನು ದೊರಕಿಸಿ ಕೊಡುವುವಂತೆ ಆ.29ರಂದು ಶಾಸಕಿ ಭಾಗೀರಥಿ ಮುರುಳ್ಯರಿಗೆ ಗ್ರಾಮ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನಂದಕುಮಾರ್ ಬಾರೆತ್ತಡ್ಕ ರವರ ನಾಯಕತ್ವದಲ್ಲಿ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಮೋಹನ್ ಬೋಳುಗುಡ್ಡೆ, ರಕ್ಷಿತ್ ಸಾರಕುಟೇಲು, ಕಿಶನ್ ಜಬಳೆ, ಅನಿಲ್ ದೇರಾಜೆ, ನಿಕಿಲ್ ಮಡ್ತಿಲ, ಅಜಿತ್ ಐವರ್ನಾಡು, ಅರುಣ್ ಗುತ್ತಿಗಾರುಮೂಲೆ, ಅನಿಲ್ ಕುತ್ಯಾಡಿ ಪ್ರೀತಮ್ ಕೋಡ್ತಿಲು ನವೀನ್ ಸಾರಕೆರೆ ಉಪಸ್ಥಿತರಿದ್ದರು.