ಗುತ್ತಿಗಾರು – ಪಂಜ ಸಂಪರ್ಕಿಸುವ ಎರಡು ರಸ್ತೆಗಳಲ್ಲಿ ಘನವಾಹನ ಸಂಚಾರ ನಿರ್ಬಂಧ

ಗುತ್ತಿಗಾರು: ಇಲ್ಲಿನ ಗುತ್ತಿಗಾರು -ಬಳ್ಳಕ್ಕ- ಪಂಜ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಜಳಕದ ಹೊಳೆ ಸೇತುವೆಯಲ್ಲಿ ದುರಸ್ತಿ ಕಾರ್ಯ ನಡೆಯಲಿದೆ. ಹಾಗಾಗಿ ಈ ಸೇತುವೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಗುತ್ತಿಗಾರು-ಬಳ್ಳಕ್ಕ-ಪಂಜ ಮಾರ್ಗದಲ್ಲಿ ಸಂಚರಿಸುವ ಘನ ವಾಹನಗಳು ಪರ್ಯಾಯ ಮಾರ್ಗವಾದ ಗುತ್ತಿಗಾರು – ಕಮಿಲ- ಬಳ್ಪ ಜಿಲ್ಲಾ ಮುಖ್ಯ ರಸ್ತೆಯಾಗಿ ಸಂಚರಿಸಬೇಕು.

ಅಲ್ಲದೆ ಕಮಿಲ-ಬಳ್ಪ ಜಿಲ್ಲಾ ಮುಖ್ಯ ರಸ್ತೆಯ ಚತ್ರಪ್ಪಾಡಿ ಸೇತುವೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಗುತ್ತಿಗಾರು- ಕಮಿಲ-ಬಳ್ಪಮಾರ್ಗದಲ್ಲಿ ಸಂಚರಿಸುವ ಘನ ವಾಹನಗಳು ಪರ್ಯಾಯ ಮಾರ್ಗವಾದ ಜಬಳೆ – ಕುಕ್ಕುಜಡ್ಕ – ಪಾಜಪಳ್ಳ ಮಾರ್ಗವಾಗಿ ನಿಂತಿಕಲ್ಲು ಮೂಲಕ ಸಂಚರಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.