ಸುಳ್ಯ: ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಆಂತರಿಕ ಚುನಾವಣೆ| ರಝಾಕ್ ಕೆನರಾ ಅಧ್ಯಕ್ಷರಾಗಿ ಆಯ್ಕೆ

ಸುಳ್ಯ: ಆ. 20; ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ, ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರತಿನಿಧಿಗಳ ಸಭೆ ಮತ್ತು ಸಮಿತಿಯ ಆಂತರಿಕ ಚುನಾವಣೆಯು ಸವಣೂರಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಅಡ್ಡೂರು ರವರು ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿ ಆನಂದ ಮಿತ್ತಬೈಲ್ ರವರು ಮಾತನಾಡಿ ಕಳೆದ ಸಾಲಿನಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಬೆಳವಣಿಗೆ, ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದರು.

ಸಮಿತಿಯ ನೂತನ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಕೆನರಾ, ಕಾರ್ಯದರ್ಶಿಯಾಗಿ ರಫೀಕ್ ನೆಲ್ಯಾಡಿ, ಉಪಾಧ್ಯಕ್ಷರಾಗಿ ವಿಕ್ಟರ್ ಮಾರ್ಟಿಸ್ ಕಡಬ, ಅಬ್ದುಲ್ ಕಲಾಂ ಸುಳ್ಯ, ಜೊತೆ ಕಾರ್ಯದರ್ಶಿಯಾಗಿ
ಎಂ.ಎಸ್. ರಫೀಕ್, ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್ ಬೆಳ್ಳಾರೆ, ಹಾಗೂ ಸಮಿತಿಯ ಸದಸ್ಯರಾಗಿ ಬಾಬು ಎನ್ ಸವಣೂರು, ಶರೀಫ್ ನಿಂತಿಕ್ಕಲ್ಲು , ಅಶ್ರಫ್ ಟರ್ಲಿ ಚುನಾಯಿತರಾದರು.

ಪಕ್ಷದ ಮುಖ್ಯ ಚುನಾವಣಾ ಅಧಿಕಾರಿಯಾಗಿ ಸಿದ್ದೀಕ್ ಪುತ್ತೂರು, ಸಹಾಯಕರಾಗಿ ಶಾಕಿರ್ ಅಳಕೆಮಜಲು ಅಶ್ರಫ್ ತಲಪಾಡಿ ಯವರು ಕಾರ್ಯನಿರ್ವಹಿಸಿದರು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಸವಣೂರು ಗ್ರಾಮ ಪಂಚಾಯತ್ ಸದಸ್ಯ ಚೆನ್ನು, ಶಬೀನಾ, ಎಸ್‌ಡಿಪಿಐ ಬೆಳ್ಳಾರೆ ಬ್ಲಾಕ್ ಅಧ್ಯಕ್ಷ ರಫೀಕ್ ಎಂ.ಎ. ಸಹಿತ ಹಲವರು ಉಪಸ್ಥಿತರಿದ್ದರು.