ಐವರ್ನಾಡು: ಇಲ್ಲಿನ ಐವರ್ನಾಡು- ದೇರಾಜೆ ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆದಿದ್ದು ಕಾಮಗಾರಿ ಫಲಕದಲ್ಲಿ ಗ್ರಾಮವನ್ನು ಕಡಬ ತಾಲೂಕಿಗೆ ಅಧಿಕಾರಿಗಳು ಸೇರಿಸಿದ್ದಾರೆ.
ಶಾಸಕರ 25ಲಕ್ಷ ಅನುದಾನದಲ್ಲಿ ದ.ಕ ಜಿಲ್ಲಾ ನಿರ್ಮಿತಿ ಕೇಂದ್ರವು ಕಾಮಗಾರಿಯನ್ನು ನಡೆಸಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಈ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ‘ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ಐವರ್ನಾಡು – ದೇರಾಜೆ ರಸ್ತೆ’ ಎಂದು ನಮೂದಿಸಿದ್ದು ಈ ಬೋರ್ಡ್ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸುಳ್ಯ ತಾಲೂಕಿನ ಹೃದಯಭಾಗದ ಗ್ರಾಮವೊಂದನ್ನು ದೂರದ ಕಡಬ ತಾಲೂಕಿಗೆ ಸೇರಿಸಿದ ಅಧಿಕಾರಿಗಳ ಈ ಸಾಹಸ(!) ಮೆಚ್ಚಲೇಬೇಕು.