ಎಲಿಮಲೆ: ಇತ್ತೀಚಿಗೆ ನಿಧನರಾದ ಎಲಿಮಲೆ ಸಮೀಪದ ಜಬಳೆ ನಿವಾಸಿ ನಿತ್ಯಾನಂದ ಹೊಸೊಳಿಕೆ, ಇವರ ಮನೆಯವರಿಗೆ ಸುಳ್ಯದ ಗೌಡರ ಯುವ ಸೇವಾ ಸಂಘದ ವತಿಯಿಂದ ಆರ್ಥಿಕ ಸಹಾಯವನ್ನು ನೀಡಲಾಯಿತು.
ಗೌಡರ ಯುವ ಸೇವಾ ಸಂಘ ನಿರ್ದೇಶಕ ನವೀನ್ ಜಾಕೆ ಯವರು ನಿತ್ಯಾನಂದ ಅವರ ಪತ್ನಿ ಹೇಮ ಎನ್.ನಂದರವರಿಗೆ ಸಹಾಯಧನ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಹೆಚ್.ಬಿ. ಕೇಶವ ಹೊಸೊಳಿಕೆ, ಜಯಂತ ಅಂಬೆಕಲ್ಲು ರಾಮಚಂದ್ರ ಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.