ಕೃಷಿ ಪಂಪ್ ಸೆಟ್ಟುಗಳ ಆರ್ ಆರ್ ನಂಬರಿಗೆ ಆಧಾರ್ ಜೋಡಣೆಗೆ ಆ. 25 ಕೊನೆಯ ದಿನಾಂಕ| ರಜಾ ದಿನದಲ್ಲೂ ನೋಂದಾವಣೆಗೆ ಅವಕಾಶ

ಕರ್ನಾಟಕ ಸರಕಾರದ ಆದೇಶದಂತೆ ಕೃಷಿ ಪಂಪ್ ಸೆಟ್ಟುಗಳ ಆರ್ ಆರ್ ನಂಬರಿಗೆ ಆಧಾರ್ ಜೋಡಣೆ ಮಾಡಬೇಕಾಗಿರುತ್ತದೆ. ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ವ್ಯಾಪ್ತಿಯ ಕೃಷಿಕರ ಆರ್ ಆರ್ ನಂಬರಿಗೆ ಆಧಾ‌ರ್ ನಂಬರ್ ಜೋಡಣೆ ಮತ್ತು ಹೆಸರು ಬದಲಾವಣೆ ಆ. 25 ಕೊನೆಯ ದಿನವಾಗಿದ್ದು ಆ.24 ಮತ್ತು ಆ.25 ರಂದು ರಜಾ ದಿನ ಆದರೂ ನೋಂದಾವಣಾ ಪ್ರಕ್ರಿಯೆ ನಡೆಯುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಸುಳ್ಯ, ಬೆಳ್ಳಾರೆ, ಪಂಜ, ಅರಂತೋಡು ಹೀಗೆ ಎಲ್ಲಾ ಶಾಖೆಗಳಲ್ಲಿಯೂ ನೋಂದಾವಣೆ ಅವಕಾಶವಿದ್ದು, ಕೃಷಿಕರು ಇದರ ಸದುಪಯೋಗ ಪಡೆಯಬಹುದಾಗಿದೆ.

ಬೇಕಾದ ದಾಖಲೆಗಳು
1. ಆಧಾರ್ ಜೆರಾಕ್ಸ್
2.RTC
3. ಪಂಪ್ ಸೆಟ್ RR ನಂಬರ್
4. death/ಸೇಲ್ ಡೆಡ್ ಕಾಪಿ
5. ರೇಷನ್ ಕಾರ್ಡ್
6. ಫೋಟೋ