ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿ ಪೃಥ್ವಿಕುಮಾರ್ ಆಯ್ಕೆ

ಸುಳ್ಯ: ಕರ್ನಾಟಕ ರಾಜ್ಯ ಎನ್.ಪಿ.ಎಸ್. ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಸುಳ್ಯ ಕ್ಷೇತ್ರದ ಶಿಕ್ಷಣಾಧಿಕಾರಿಗಳ ಕಚೇರಿ ಪೃಥ್ವಿ ಕುಮಾರ್ ಟಿ. ಆಯ್ಕೆಯಾಗಿದ್ದಾರೆ.

ಆ.17ರಂದು ಬೆಂಗಳೂರಿನಲ್ಲಿ ನಡೆದ ನಮ್ಮಭಿಮಾನದ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಈ ಸಂದರ್ಭದಲ್ಲಿ ಪೃಥ್ವಿ ಕುಮಾರ್ ಟಿ. ಆಯ್ಕೆಯಾಗಿದ್ದಾರೆ.

ಇವರು ಕರ್ನಾಟಕ ಸರಕಾರಿ ನೌಕರರ ಸಂಘದ ಸದಸ್ಯರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.