ಗುತ್ತಿಗಾರು: ಸರಕಾರದ ಸೂಚನೆಯಂತೆ ಎಲ್ಲ ಕೃಷಿ ಜಮೀನಿನ ಪಹಣಿಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಿದ್ದು, ಪಹಣಿಗೆ ಆಧಾರ್ ಜೋಡಣೆಯಾಗದೆ ಬಾಕಿ ಉಳಿದಿರುವ ಪಹಣಿದಾರರು ತಕ್ಷಣ ಜೋಡಣೆ ಮಾಡಿಸಲು ಗುತ್ತಿಗಾರು ಗ್ರಾಮಆಡಳಿತಾಧಿಕಾರಿಯವರು ಪ್ರಕಟಣೆ ಹೊರಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ದಿನಾಂಕ 20/08/2024 ರಂದು ಬೆಳಿಗ್ಗೆ 8-30 ರಿಂದ 6-30ರವರೆಗೆ ಗುತ್ತಿಗಾರು ಗ್ರಾಮಕ್ಕೆ ಸಂಬಂಧಿಸಿದ ಪಹಣಿಗಳಿಗೆ ಆಧಾರ್ ಲಿಂಕ್ ಮಾಡಲಾಗುವುದು ಆಧಾರ್ ಲಿಂಕ್ ಮಾಡದ ಪಹಣಿದಾರರು ತಮ್ಮ ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗೆ ಲಿಂಕ್ ಆದ ಮೊಬೈಲ್ ಪೋನ್ ನೊಂದಿಗೆ ಗುತ್ತಿಗಾರು ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಗೆ ಬಂದು ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.