ಗಾಂಧಿನಗರ, ಗುರುಂಪುವಿನ ಎರಡು ಮನೆಯಿಂದ ಸಿಲಿಂಡರ್ ಕಳ್ಳತನ

ಸುಳ್ಯ: ಗಾಂಧಿನಗರ ಹಾಗೂ ಗುರುಂಪು ಪರಿಸರದ ಎರಡು ಮನೆಗಳಿಂದ ಆ. 17 ರಂದು ರಾತ್ರಿ ಗ್ಯಾಸ್‌ ಸಿಲೆಂಡ‌ರ್ ಕಳ್ಳತನ ವಾಗಿರುವ ಬಗ್ಗೆ ವರದಿಯಾಗಿದೆ.

ಗುರುಂಪು ನಿವಾಸಿ ಬಶೀರ್ ಪಿಟ್ಟರ್ ಹಾಗೂ ಗಾಂಧಿ ನಗರ ನಿವಾಸಿ ಮಹಮ್ಮದ್ ಪಿ.ಜಿ ಅವರ ಮನೆಯ ಹಿಂಬದಿಯಲ್ಲಿ ಇಟ್ಟಿದ್ದ ಅಡುಗೆ ಗ್ಯಾಸ್ ಸಿಲಿಂಡರನ್ನು ಕಳ್ಳರು ರಾತ್ರಿ ವೇಳೆ ಕಳ್ಳತನ ಮಾಡಿದ್ದಾರೆ. ಮನೆಯವರು ಬೆಳಗ್ಗೆ ಅಡುಗೆ ಮಾಡಲು ಬಂದಾಗ ಸಿಲಿಂಡ‌ರ್ ಕಳ್ಳತನ ಆಗಿರುವ ಬಗ್ಗೆ ತಿಳಿದಿದೆ.