ಬೆಳ್ಳಾರೆ: ಕ್ರೈನ್ – ರಿಕ್ಷಾ ಮುಖಾಮುಖಿ | ರಿಕ್ಷಾ ಚಾಲಕನಿಗೆ ಗಾಯ

ಬೆಳ್ಳಾರೆ; ಆ.15: ಕ್ರೈನ್ – ರಿಕ್ಷಾ ಮುಖಾಮುಖಿ ಡಿಕ್ಕಿಯಾದ ಪರಿಣಾಮ ರಿಕ್ಷಾ ಚಾಲಕ ಗಾಯಗೊಂಡ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ.

ಮೇಲಿನ ಪೇಟೆಯಿಂದ ಕೆಳಗಿನ ಪೇಟೆ ಕಡೆಗೆ ಹೋಗುತ್ತಿದ್ದ ರಿಕ್ಷಾ ಹಾಗೂ ಕೆಳಗಿನ ಪೇಟೆಯಿಂದ ಮೇಲಿನ ಪೇಟೆ ಕಡೆ ಬರುತ್ತಿದ್ದ ಕ್ರೈನ್ ಬೆಳ್ಳಾರೆ ಗುರುರಾಘವೇಂದ್ರ ಸ್ಟೋರ್ಸ್ ಮುಂಭಾಗ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ರಿಕ್ಷಾ ಚಾಲಕ ಕೊಡಿಯಾಲದ ರಾಮಚಂದ್ರ ಎಂಬವರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.