ಪಂಜ: ಆ.13; ರಾತ್ರಿ ಸುರಿದ ಭಾರೀ ಮಳೆಗೆ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಂಪೌಂಡ್ ಕುಸಿದಿದ್ದು, ಆಸ್ಪತ್ರೆ ಅಪಾಯದಲ್ಲಿದೆ.
ಕೌಂಪಾಂಡ್ ಬದಿಯಿಂದ ಬಹಳಷ್ಟು ಆಳವಾದ ಜಾಗವಾಗಿದ್ದು, ಆಸ್ಪತ್ರೆ ಕಟ್ಟಡ ಅಪಾಯದಲ್ಲಿದೆ. ಕಟ್ಟಡದ ಸಮೀಪದವರೆಗೆ ಬಿರುಕು ಬಿಟ್ಟು ಭಾರೀ ಅಪಾಯದಲ್ಲಿದೆ. ಕಟ್ಟಡದ ಇನ್ನೊಂದು ಬದಿಯ ಕೌಂಪಾಂಡ್ ಕುಸಿತ ಗೊಂಡಿದ್ದಾಗ ಕಟ್ಟದ ಗೋಡೆಯಲ್ಲಿ ಸ್ವಲ್ಪ ಬಿರುಕು ಕಾಣಿಸಿಕೊಂಡಿತ್ತು.