ಬಳ್ಪ: ನಾಪತ್ತೆಯಾಗಿದ್ದ ಯುವಕನ ಮೃತದೇಹ ನದಿಯಲ್ಲಿ ಪತ್ತೆ

ಬಳ್ಪ: ಆ.೪.ರಂದು ಮನೆಯಿಂದ ನಾಪತ್ತೆಯಾಗಿದ್ದ ಬಳ್ಪದ ಯುವಕನ ಮೃತ ದೇಹ ಆ.೭ರಂದು ಹೊಳಯಲ್ಲಿ ಪತ್ತೆಯಾಗಿದೆ.

ಬಳ್ಪ ಗ್ರಾಮದ ಅಕ್ಕೇಣಿಯ ಅಶೋಕ್ (೩೩ವ)ಎಂಬ ಯುವಕ ನಾಪತ್ತೆಯಾಗಿದ್ದು, ಮೂರು ದಿನದ ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ಪಂಜ ಹೊಳೆಯ ಪಲ್ಲೋಡಿ ಅಡ್ಕದಲ್ಲಿ ಮೃತ ದೇಹವನ್ನು ಮುಳುಗು ತಜ್ಞರು ಪತ್ತೆ ಹಚ್ಚಿದ್ದಾರೆ.

ಕಾರ್ಯಾಚರಣೆಯಲ್ಲಿ ಸುಳ್ಯದ ಮುಳುಗು ತಜ್ಞರ ತಂಡ ಸಂಪಾಜೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಪ್ರಗತಿ ಅಂಬ್ಯುಲೆನ್ಸ್ ನ ಅಬ್ದುಲ್ ರಜಾಕ್ (ಅಚ್ಚು), ಚಿದಾನಂದ ಗೂನಡ್ಕ , ಶ್ರೀ ಮುತ್ತಪ್ಪನ್ ಅಂಬ್ಯುಲೆನ್ಸ್ ನ ಅಭಿ ಸುಳ್ಯ ಪಾಲ್ಗೊಂಡಿದ್ದರು. ಊರವರು , ಸಂಬAಧಿಕರು ,ನಿಂತರ ಹುಡುಕಾಟ ನಡೆಸಿ, ಸಹಕರಿಸಿದ್ದಾರೆ .ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.