ಕಡಬ: ಮೀನು ಮಾರುಕಟ್ಟೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿ

ಸಮಗ್ರ ನ್ಯೂಸ್: ಕಡಬ ತಾಲೂಕಿನ ಕಲ್ಲುಗುಡ್ಡೆ ಎಂಬಲ್ಲಿ ಮೀನು ಮಾರುಕಟ್ಟೆಗೆ ಯಾವುದೋ ಒಂದು ಅಪರಿಚಿತ ವಾಹನವು ಡಿಕ್ಕಿ ಹೊಡೆದು ಹೋದ ಘಟನೆ ಆ.3 ರಂದು ನಡೆದಿದೆ.

ಡಿಕ್ಕಿ ಹೊಡೆದ ರಭಸದಲ್ಲಿ ಮಾರ್ಕೆಟ್ ನ ಮೇಲೆ ಹಾಕಿದ ಸಿಮೆಂಟ್ ಸೀಟು ಕೆಳಗಿರುವ ಸಿಮೆಂಟ್ ಕಂಬ ತುಂಡಾಗಿ ಹೋಗಿದೆ. ಈ ಬಗ್ಗೆ ಕಲ್ಲುಗುಡ್ಡೆ ಗ್ರಾಮ ಪಂಚಾಯತ್ ಗೆ ದೂರು ಕೊಟ್ಟರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ.

ಪಂಚಾಯತ್ ಅಧ್ಯಕ್ಷರು ಮತ್ತು ಸಿಬ್ಬಂದಿಗಳು ದೂರು ಕೊಟ್ಟರು ಸ್ಥಳಕ್ಕೆ ಬಾರದೆ ನಿರ್ಲಕ್ಷದಿಂದ ಇದ್ದಾರೆ. ಏನಾದರೂ ಅನಾಹುತ ಆದರೆ ಇದಕ್ಕೆ ನೇರ ಹೊಣೆ ಪಂಚಾಯತ್ ನ ಅಧ್ಯಕ್ಷರು ಮತ್ತು ಸಿಬ್ಬಂದಿಗಳು ಕಾರಣವಾಗುತ್ತಾರೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.