ಗುತ್ತಿಗಾರು: ಐ.ಎಫ್.ಸಿ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಗುತ್ತಿಗಾರು: ಇಲ್ಲಿನ ಪೇಟೆ ಪ್ರದೇಶದಲ್ಲಿ ಜು. 28ರಂದು ಐಎಫ್‌ಸಿ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಅವರು ಐಎಫ್‌ಸಿ ಧ್ವಜವನ್ನು ತೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಸ್ವಚ್ಚತಾ ಕಾರ್ಯಕ್ರಮ ಮಹತ್ವದ ಕುರಿತು ಮಾತನಾಡಿದರು.

ವರ್ತಕ ಸಂಘದ ಅಧ್ಯಕ್ಷ ಶಿವರಾಮ ಕರುವಜೆ, ಪ್ರಮುಖರಾದ ಎ.ವಿ. ತೀರ್ಥರಾಮ, ರವಿಪ್ರಕಾಶ್ ಬಾಕಿಲ, ಚಂದ್ರಶೇಖರ ಕಡೋಡಿ, ಕೃಷ್ಣಯ್ಯ ಮೂಲೆತೋಟ ಮತ್ತು ತೇಜಸ್ವಿನಿ ಕಟ್ಟೆಪುಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಐಎಫ್‌ಸಿ ಅಧ್ಯಕ್ಷರಾದ ಮುಳಿಯ ಸಾತ್ವಿಕ್, ಉಪಾಧ್ಯಕ್ಷರಾದ ಕೌಶಿಕ್ ಶ್ಯಾಮ್, ಸುಮುಖ ರಾಮ್, ಮೋನಿಷ್ ಬಾಕಿಲ, ಪ್ರಧಾನ ಕಾರ್ಯದರ್ಶಿ ಆಶ್ಲೇಶ್ ಕೆ ಡಿ, ಕಾರ್ಯದರ್ಶಿಯರಾದ ಕಿರಣ್ ವಳಲಂಬೆ, ವರ್ಷಿತ್ ಕೆ, ಬಾಲಕೃಷ್ಣ ಉಜಿರಡ್ಕ, ರಾಕೇಶ್ ಮೆಟ್ಟಿನಡ್ಕ ಮತ್ತು ಸದಸ್ಯರಾದ ನಿಖಿಲ್ ಮತ್ತು ಆರ್ಯ ವೈ ಕೆ ಮತ್ತಿತರರು ಉಪಸ್ಥಿತರಿದ್ದರು.
ಸಾಯಿ ಮಧುರ ಬೇಕರಿಯ ಮಾಲೀಕ ಚರಣ್ ಸಹಕರಿಸಿದರು.