ಅರಂತೋಡು: ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ, ಬೈಕ್ ಸವಾರ ಗಾಯಗೊಂಡ ಘಟನೆ ಮಾಣಿ – ಮೈಸೂರು ಹೆದ್ದಾರಿಯ ಅರಂತೋಡು ಸಮೀಪದ ಬಿಳಿಯಾರಿನಲ್ಲಿ ಜು.28ರಂದು ರಾತ್ರಿ ಸಂಭವಿಸಿದೆ.
ಬಿಳಿಯಾರು ಪೆಟ್ರೋಲ್ ಪಂಪ್ ಸಮೀಪ ಕಾರು ಮತ್ತು ಬೈಕ್ ಡಿಕ್ಕಿ ಯಾಗಿದ್ದು, ಬೈಕ್ ಸವಾರ ಕಲ್ಲುಗುಂಡಿಯ ಮಹಮ್ಮದ್ ಎಂಬವರ ಕಾಲಿಗೆ ಗಾಯವಾಗಿದೆ. ಗಾಯಾಳುವನ್ನು ಸ್ಥಳೀಯರು ಸುಳ್ಯದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೆಂದು ತಿಳಿದುಬಂದಿದೆ.