ಉಜಿರೆ: ಇಲ್ಲಿನ ಸಮೀಪದ ನೆರಿಯ ಗ್ರಾಮದ ಕುವೆತ್ತಿಲ್ ಅನಿಲ್ ಎಂಬುವರ ಮನೆಯ ಹಿಂಬದಿಯಲ್ಲಿ ಭಾನುವಾರ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಗೆ ಪಸರಿಸಿದ್ದರಿಂದ ಮನೆಗೆ ಹಾನಿ ಆಗಿದೆ. ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ.
ಮನೆಯಲ್ಲಿ ಯಾರೂ ಇರಲಿಲ್ಲ. ಸ್ಥಳೀಯರಾದ ಆನಂದ್, ಅಶೋಕ್, ಸತೀಶ್, ಧರ್ಣಪ್ಪ ಗೌಡ, ಯಶೋದಾ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಮನೆಯ ಸುತ್ತ ಬೆಂಕಿ ಹಬ್ಬಿದ್ದರಿಂದ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ